ಬೆಂಡೆಕಾಯಿ ಸಾರು

– ಸವಿತಾ.

ಬೇಕಾಗುವ ಸಾಮಾನುಗಳು

ತೊಗರಿ ಬೇಳೆ – 1/2 ಲೋಟ
ಪಾಲಕ್ ಸೊಪ್ಪು – 4 ಎಲೆ
ಹಸಿ ಮೆಣಸಿನಕಾಯಿ – 2
ಬೆಂಡೆಕಾಯಿ – 20
ಹುಣಸೇ ಹಣ್ಣು – 1/2 ನಿಂಬೆ ಹಣ್ಣಿನ ಗಾತ್ರ
ಟೊಮೊಟೊ – 2
ಸಾಸಿವೆ – 1/2 ಚಮಚ
ಕರಿಬೇವು – 10 ಎಲೆ
ಇಂಗು – 1/4 ಚಮಚ
ಮೆಂತೆ – 1/4 ಚಮಚ
ಒಣ ಮೆಣಸಿನಕಾಯಿ – 2
ಈರುಳ್ಳಿ – 1
ಕೊತ್ತಂಬರಿ ಪುಡಿ – 1 ಚಮಚ
ಸಾಂಬಾರ್ ಪುಡಿ – 1 ಚಮಚ
ಒಣ ಖಾರದ ಪುಡಿ – 1 ಚಮಚ
ಕೊತ್ತಂಬರಿ ಸೊಪ್ಪು ಸ್ವಲ್ಪ
ಎಣ್ಣೆ – 3 ಚಮಚ
ಅರಿಶಿಣ ಪುಡಿ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ಬಗೆ

ಪಾಲಕ್ ಸೊಪ್ಪು ಕತ್ತರಿಸಿ, ಎರಡು ಹಸಿ ಮೆಣಸಿನಕಾಯಿ ಮತ್ತು ತೊಗರಿ ಬೇಳೆ ಸೇರಿಸಿ ಕುಕ್ಕರ್ ನಲ್ಲಿಟ್ಟು ಮೂರು ಕೂಗು ಕುದಿಸಿ ಇಳಿಸಿ. ಬೆಂಡೆಕಾಯಿ ತೊಳೆದು ಆರಿಸಿ ನಂತರ ಕತ್ತರಿಸಿ ಇಟ್ಟುಕೊಳ್ಳಿ. ಹುಣಸೇ ಹಣ್ಣು ನೆನೆ ಹಾಕಿ ರಸ ತೆಗೆದು ಸೇರಿಸಿಡಿ. ಟೊಮೋಟೊ ಕತ್ತರಿಸಿ ಹಾಕಿ ಎಲ್ಲ ಸೇರಿಸಿ ಒಂದು ಕುದಿ ಕುದಿಸಿ ಇಳಿಸಿ.

ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ಸಾಸಿವೆ ಕರಿಬೇವು ಇಂಗು, ಮೆಂತೆ ಕಾಳು ಒಣ ಮೆಣಸಿನಕಾಯಿ ಹಾಕಿ ಹುರಿಯಿರಿ. ಈರುಳ್ಳಿ ಕತ್ತರಿಸಿ ಹಾಕಿ ಹುರಿಯಿರಿ. ಉಪ್ಪು, ಅರಿಶಿಣ ಪುಡಿ, ಕೊತ್ತಂಬರಿ ಪುಡಿ, ಸಾಂಬಾರ್ ಪುಡಿ, ಒಣ ಖಾರದ ಪುಡಿ ಸೇರಿಸಿ. ನಂತರ ಕುದಿಸಿದ ಬೆಂಡೆಕಾಯಿ ಟೊಮೋಟೊ ಬೇಳೆ, ಪಾಲಕ್ ಹಾಕಿ ಒಂದು ಕುದಿ ಕುದಿಸಿ ಇಳಿಸಿ, ಕತ್ತರಿಸಿದ ಕೊತ್ತಂಬರಿ ಸೊಪ್ಪು ಸ್ವಲ್ಪ ಮೇಲೆ ಉದುರಿಸಿ. ಈಗ ಬೆಂಡೆಕಾಯಿ ಸಾರು ಸವಿಯಲು ಸಿದ್ಧ. ಅನ್ನದ ಜೊತೆ ಬೆಂಡೆಕಾಯಿ ಸಾರು ಸವಿಯಿರಿ .

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications