ಕವಿತೆ: ಪ್ರೀತಿಯ ಪಯಣಿಗ

– .

ಕನಸಿನ ಲೋಕದೊಳಗೆ
ಪ್ರೀತಿಯ ಹುಡುಕಾಟದ
ಪಯಣಿಗ ನಾನು

ಒಮ್ಮೆಯಾದರೂ
ಕನಸಿನಾಚೆ
ಬಂದು ಸಿಗಬಾರದೆ
ಬದುಕಿನ ಜೊತೆ ಜೊತೆಯಲಿ

ನಿನ್ನಯ ಹುಡುಕಾಟದಲಿ
ಕಳೆದು ಹೋಗುತಿದೆ ಕಾಲ
ಕನಸಲ್ಲೇ ಇರುವೆಯಾ
ನನಸಲ್ಲೂ ಬರುವೆಯಾ

ಯಾರೇ ನೀ ಯಾರೇಲೆ
ತುಂಬಾ ಕಾಡುವ ತುಂಟಿ
ನನ್ನಯ ಬದುಕಲಿ ಬಂದು
ನೋಡೆ ನಿನ್ನಯ ಪ್ರೀತಿ ತಿಳಿವುದು

ಕನಸಲ್ಲೆ ಕಾಡೋದ ಬಿಟ್ಟು
ಕಣ್ಣ ಮುಂದೆ ಬಾರೆ ಸಾಕು
ಒಮ್ಮೆ ಜೀವನ ಪೂರ‍್ತಿ
ನಿನ್ನ ನೆನಪಲ್ಲೆ ಕಳೆದು ಬಿಡುವೆ
ಕನಸೋ ನನಸೋ
ಪ್ರೀತಿಯ ಪಯಣಿಗ ನಾನು

(ಚಿತ್ರ ಸೆಲೆ: pxhere.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Sudeep B S says:

    ಕವಿತೆ ಚೆನ್ನಾಗಿದೆ

ಅನಿಸಿಕೆ ಬರೆಯಿರಿ: