ಕವಿತೆ: ಕಾಮನಬಿಲ್ಲು

– ಸವಿತಾ.

ಕಾರ‍್ಮೋಡ ಸರಿಸಿ
ಸುರಿಸಿಹ ಮಳೆ
ಸಪ್ತ ವರ‍್ಣಗಳ ಹರಿಸಿ
ಚಿತ್ತಾರವ ಹೆಣೆದಿದೆ

ರಂಗು ರಂಗಿನಲಿ
ಒಲವಿನೋಕುಳಿಯ ಲಾಸ್ಯವೇ
ಚೆಂದದಿ, ಬಹು ಮುದದಿ
ಮೈಮನ ರೋಮಾಂಚನಗೊಳಿಸಿದೆ

ಬಾನು ಬುವಿಗಿಂದು ಸುಗ್ಗಿಯೋ ಸುಗ್ಗಿ
ಹಿಗ್ಗಿಗ್ಗಿ ಎಲ್ಲೆಡೆ ಸೌಂದರ‍್ಯವನೇ ಹಾಸಿದೆ
ತಣಿದು ತೊನೆದಾಡಿ
ಮೂಡಿತೇ ಕಾಮನ ಬಿಲ್ಲಿನ ಉಯ್ಯಾಲೆ

ನೋಡುವ ಕಂಗಳು ಅರಳಿಸಿದವು ಕಾಂತಿ
ಕಣ್ಮನ ಸೆಳೆಯುವ ಈ ಸ್ರುಶ್ಟಿಗೆ
ಸಾಟಿ ಯಾರೋ ನಾ ಕಾಣೆ

(ಚಿತ್ರ ಸೆಲೆ: pexels.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: