ಕವಿತೆ: ಒಲುಮೆಯ ಕುಲುಮೆ

– ಕಿಶೋರ್ ಕುಮಾರ್.

ಒಲುಮೆಯ ಕುಲುಮೆಯು ತಾಗಿ
ತನುವು ನೋಡಿತು ನಿನ್ನನೆ ಬಾಗಿ
ತೆರೆಯಿತು ಮನವು ನಿನ್ನಾಸರೆಗಾಗಿ

ಕಣ್ ಸನ್ನೆಯಲಿ ಕರೆಯುವೆ ನೀನು
ಬಳಿಬಾರದೆ ಕಿಚಾಯಿಸುವೆಯೇನು
ಈ ಹುಡುಗಾಟವ ಹೇಗೆ ತಾಳಲಿ ನಾನು

ನಿನ ನೆನಪಲೇ ದಿನಗಳದೂಡಿ
ಬಲು ದೂರದಿ ಬಂದೆನು ಓಡಿ
ಕಾರಣ ನಿನ್ನಾ ನೋಟದ ಮೋಡಿ

ತಡವಾಯಿತು ಅದೂ ದಿಟವೆ
ನಾ ಹೇಗೆ ನಿನ್ನಾ ಮರೆವೆ
ನಿನಗಾಗೆ ದಿನಗಳ ಸವೆಸುತಲಿರುವೆ

ಸಣ್ಣ ತಪ್ಪಿಗೆ ಮುನಿಸೇನು
ನೀನಿರದೆ ಇರಬಹುದೆ ನಾನು
ಈ ಕೋಪ ಸಾಕಿನ್ನು, ಒಲವೆಂದರೆ ಇಶ್ಟೇ ಏನು?

(ಚಿತ್ರ ಸೆಲೆ: unsplash.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: