ಕವಿತೆ: ಪ್ರೇಮ ಸೇತುವೆ

– ಸವಿತಾ.

ಒಲವು, Love

ಹಂಬಲದ ಕವಿತೆ
ಈ ಜೀವನ ಗೀತೆ
ಓಡುತಿದೆ ತನ್ನಶ್ಟಕ್ಕೆ ತಾನೇ
ಸಮಯದ ಜೊತೆ

ಬೇಕುಗಳಿಗಿಲ್ಲ ಕೊರತೆ
ಬಯಕೆಯೋ ಚಿಗುರುವ ಗರಿಕೆ
ಆಸೆಗಳೋ ಮುಗಿಲು ಮುಟ್ಟಿವೆ
ನನಸಾಗುವ ಮಾತೇ
ಕನಸಿನ ಕನವರಿಕೆ

ಆದರೂ ಬಾಯಾರಿಕೆ
ತಣಿಸುತ ಸಾಗುವ ಚಲಕೆ
ಅದ್ಯಾವ ಶಕ್ತಿಯ ಪ್ರೇರಣೆ
ಪ್ರೀತಿ ವ್ಯಾಮೋಹದ ಬಂದನವೇ
ಸಲಹುತಿದೆ

ಹಂಬಲದ ಈ ಜೀವನ ಗೀತೆ
ಕವಿತೆ, ಪ್ರೇಮ ಸೇತುವೆ
ಹಾಡುತಾ ನಲಿಯುತಾ
ಸಾಗಿಸುವುದೇ ಜೀವಂತಿಕೆ

( ಚಿತ್ರ ಸೆಲೆ: pxhere.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: