ಅವಲಕ್ಕಿ ವಡೆ
– ಸವಿತಾ.
ಬೇಕಾಗುವ ಸಾಮಾನುಗಳು
ಅವಲಕ್ಕಿ (ಮೀಡಿಯಮ್) – 1 ಲೋಟ
ಕಡಲೇ ಹಿಟ್ಟು – 1 ಲೋಟ
ಈರುಳ್ಳಿ – 1
ಹಸಿ ಮೆಣಸಿನಕಾಯಿ – 2
ಜೀರಿಗೆ – 1/2 ಚಮಚ
ಹಸಿ ಕೊಬ್ಬರಿ ತುಂಡುಗಳು ಅತವಾ ತುರಿ – 2 ಚಮಚ (ಇಲ್ಲದಿದ್ದರೂ ನಡೆಯುತ್ತದೆ)
ಉಪ್ಪು – ರುಚಿಗೆ ತಕ್ಕಶ್ಟು
ಅರಿಶಿಣ ಪುಡಿ – 1/4 ಚಮಚ
ಮೊಸರು – 1/2 ಲೋಟ
ಎಣ್ಣೆ – 3 ಚಮಚ
ಕರಿಯಲು ಎಣ್ಣೆ
ಕೊತ್ತಂಬರಿ ಸೊಪ್ಪು ಸ್ವಲ್ಪ
ಮಾಡುವ ಬಗೆ
ಅವಲಕ್ಕಿಯನ್ನು ನೀರಿನಲ್ಲಿ ತೊಳೆದು, ಹತ್ತು ನಿಮಿಶ ನೆನೆಯಲು ಬಿಡಿ. ನೆನೆಸಿದ ಅವಲಕ್ಕಿಯನ್ನು ನಾದಿಕೊಂಡು, ಕಡಲೇ ಹಿಟ್ಟು ಹಾಗೂ ಮೊಸರು ಸೇರಿಸಿ. ಈರುಳ್ಳಿಯನ್ನು ಸಣ್ಣದಾಗಿ ಕತ್ತರಿಸಿ ಸೇರಿಸಿ. ಹಸಿ ಮೆಣಸಿನಕಾಯಿ, ಜೀರಿಗೆ ಮತ್ತು ಉಪ್ಪು ಅರೆದು ಹಾಕಿ. ಕೊತ್ತಂಬರಿ ಸೊಪ್ಪು ಮತ್ತು ಕರಿ ಬೇವು ಕತ್ತರಿಸಿ ಹಾಕಿ. ಅರಿಶಿಣ ಪುಡಿ ಸ್ವಲ್ಪ, ಸ್ವಲ್ಪ ಹಸಿ ಕೊಬ್ಬರಿ ತುರಿ ಹಾಕಿ. ಒಂದು ಚಮಚ ಎಣ್ಣೆ ಹಾಕಿ ಚೆನ್ನಾಗಿ ಕಲಸಿ ಇಟ್ಟುಕೊಳ್ಳಿ.
ಕೈಗೆ ಎಣ್ಣೆ ಹಚ್ಚಿಕೊಂಡು ವಡೆ ತಟ್ಟಿ, ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಈಗ ಅವಲಕ್ಕಿ ವಡೆ ಸವಿಯಲು ಸಿದ್ದ. ಚಟ್ನಿ, ಸಾರಿನ ಜೊತೆ ಸವಿಯಿರಿ.
ಇತ್ತೀಚಿನ ಅನಿಸಿಕೆಗಳು