ಮಸಾಲಾ ಮಂಡಕ್ಕಿ
– ಸವಿತಾ.
ಬೇಕಾಗುವ ಸಾಮಾನುಗಳು
ಕಡಲೆಪುರಿ (ಚುರುಮುರಿ) – 3 ಬಟ್ಟಲು
ಹಸಿ ಮೆಣಸಿನಕಾಯಿ – 1
ಗಜ್ಜರಿ (ಕ್ಯಾರೆಟ್) – 1/2
ಈರುಳ್ಳಿ – 1
ಟೊಮೆಟೊ – 2
ಮಾವಿನ ಕಾಯಿ – 1/4
ತುಪ್ಪ – 2 ಚಮಚ
ಕಡಲೇ ಬೀಜ – 2 ಚಮಚ
ಸೇವ್ – 2 ಚಮಚ
ಒಣ ಕಾರದ ಪುಡಿ – 1/2 ಚಮಚ
ಸಾಂಬಾರ್ ಪುಡಿ – 1/4 ಚಮಚ
ಚಾಟ್ ಮಸಾಲೆ ಪುಡಿ – 1/4 ಚಮಚ
ಉಪ್ಪು ರುಚಿಗೆ ತಕ್ಕಶ್ಟು
ಕೊತ್ತಂಬರಿ ಸೊಪ್ಪು ಸ್ವಲ್ಪ
ಪುದೀನಾ ಸ್ವಲ್ಪ
ಮಾಡುವ ಬಗೆ
ತುಪ್ಪ ಬಿಸಿ ಮಾಡಿ ಕಡಲೇ ಬೀಜ ಹುರಿದು ಒಲೆ ಆರಿಸಿ ಇಳಿಸಿ. ಆರಿದ ನಂತರ ಅದೇ ಬಾಣಲೆಗೆ ಉಪ್ಪು, ಒಣ ಕಾರದ ಪುಡಿ ಹಾಕಿ. ಸಾಂಬಾರ್ ಪುಡಿ, ಚಾಟ್ ಮಸಾಲೆ ಪುಡಿ ಹಾಕಿ, ಈರುಳ್ಳಿ, ಹಸಿ ಮೆಣಸಿನಕಾಯಿ ಕತ್ತರಿಸಿ ಸೇರಿಸಿ. ಗಜ್ಜರಿ ಸಿಪ್ಪೆ ತೆಗೆದು ತುರಿದು ಸೇರಿಸಿ. ಸ್ವಲ್ಪ ಮಾವಿನ ಕಾಯಿ ತುರಿ ಹಾಕಿ. ಟೊಮೆಟೊ, ಕೊತ್ತಂಬರಿ ಸೊಪ್ಪು, ಪುದೀನಾ ಕತ್ತರಿಸಿ ಹಾಕಿ.
ಕೊನೆಗೆ ಕಡಲೆಪುರಿ ಹಾಕಿ ಚೆನ್ನಾಗಿ ಕಲಸಿಕೊಂಡು ಮೇಲೆ ಸೇವ್ ಉದುರಿಸಿದರೆ ಮಸಾಲಾ ಮಂಡಕ್ಕಿ ತಯಾರಾಯಿತು. ಬಿಸಿ ಬಿಸಿ ಚಹಾ ಜೊತೆ ಸವಿಯಿರಿ.
ಇತ್ತೀಚಿನ ಅನಿಸಿಕೆಗಳು