ಕವಿತೆ: ನಿನದೇ ನೆನಪು

– ಮಹೇಶ ಸಿ. ಸಿ.

ಒಲವು, Love

ಮನಸಿನ ಒಳಗೆ ಕವಿತೆಯ ಬರೆದೆ
ನಿನದೇ ಸಾಲು ನೋಡು ಮೆಲ್ಲನೆ
ಪ್ರೀತಿಯ ಅಕ್ಶರ ನೀಡಿದೆ ವರ‍್ಣನೆ
ನಿನದೇ ನೆನಪು ಮನದಲಿ ಸುಮ್ಮನೆ

ಬೀಳುವ ಹಾಗಿದೆ ಮಳೆಯ ಸೂಚನೆ
ಹನಿಯೂ ಕಾದಿದೆ ಸೋಕಲು ಬುವಿಯನೆ
ಮನವು ಕುಣಿದಿದೆ ಸೇರಲು ನಿನ್ನನೇ
ಪ್ರೀತಿಯು ಬಯಸಿದೆ ನಿನ್ನಯ ಮನಸನೆ

ಸುಂದರ ಪ್ರಕ್ರುತಿ ನೋಡಲು ಅಂದವೋ
ಹಾಲು ಹುಣ್ಣಿಮೆಯ ಬೆಳಕು ಚೆಂದವೋ
ಇಬ್ಬರೇ ಅಲ್ಲಿ ಜತೆಯಲಿ ಎಂದೆಂದಿಗೂ
ಆ ಸುಂದರ ಕ್ಶಣಗಳಿಗೆ ನಾವಿಬ್ಬರೇ ಸಾಕ್ಶಿಯು

ಕತ್ತಲ ರಾತ್ರಿಯೂ ಬಯಕೆಯ ಬಯಸಿದೆ
ತಣಿಸು ಮನವನು ಸೂಚನೆ ನೀಡಿದೆ
ದೇವರ ಕೇಳುವೆ ಯಾರನು ಬೇಡದೆ
ನೀಡು ವರವನು ಮೋಸವ ಮಾಡದೇ

ನವಿಲಿನ ಅಂದವು ನಿನ್ನಯ ಚೆಂದವೂ
ಗರಿಯಲಿ ಬರೆದಿಹೆ ಅದ್ಬುತ ಬರಹವೂ
ಜಿಂಕೆಯ ಮೀರಿಸೋ ಸುಂದರ ನೋಟವೂ
ಸಾಲದು ಬರೆಯಲು ಸುಮದುರ ಕೂಟವು

( ಚಿತ್ರ ಸೆಲೆ: pxhere.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications