ಶೇಂಗಾ ಕೊಬ್ಬರಿ ಬರ‍್ಪಿ

– ಸವಿತಾ.

ಬೇಕಾಗುವ ಸಾಮಾನುಗಳು:

  • ಶೇಂಗಾ ( ಕಡಲೇ ಬೀಜ) – 1 ಬಟ್ಟಲು
  • ಒಣ ಕೊಬ್ಬರಿ ತುರಿ – 1 ಬಟ್ಟಲು
  • ಹಾಲು – 1 ಬಟ್ಟಲು
  • ತುಪ್ಪ – 2 ಚಮಚ
  • ಬೆಲ್ಲ ಅತವಾ ಸಕ್ಕರೆ – 1 ಬಟ್ಟಲು
  • ಏಲಕ್ಕಿ – 2

ಮಾಡುವ ಬಗೆ

ಮೊದಲಿಗೆ ಕಡಲೇ ಬೀಜ (ಶೇಂಗಾ) ಹುರಿಯಿರಿ. ಅದು ಆರಿದ ನಂತರ ಸಿಪ್ಪೆ ತೆಗೆದು ಮಿಕ್ಸರ್ ನಲ್ಲಿ ಪುಡಿ ಮಾಡಿಟ್ಟುಕೊಳ್ಳಿರಿ. ಕೊಬ್ಬರಿ ತುರಿದು ಮಿಕ್ಸರ್ ನಲ್ಲಿ ಪುಡಿ ಮಾಡಿ. ಬಾಣಲೆಗೆ ಹಾಲು ಹಾಕಿ ಕಾಯಲು ಇಡಿ. ಇದಕ್ಕೆ ಬೆಲ್ಲ ಅತವಾ ಸಕ್ಕರೆ ಹಾಕಿ. ಆಮೇಲೆ ಕೊಬ್ಬರಿ ಪುಡಿ ಮತ್ತು ಕಡಲೇ ಬೀಜ(ಶೇಂಗಾ) ಪುಡಿ ಹಾಕಿರಿ. ತುಪ್ಪ ಸೇರಿಸಿ ಸಣ್ಣ ಉರಿಯಲ್ಲಿ ಗಟ್ಟಿ ಆಗುವ ತನಕ ತಿರುಗಿಸಿ, ಒಲೆ ಆರಿಸಿರಿ. ಏಲಕ್ಕಿ ಪುಡಿ ಮಾಡಿ ಹಾಕಿ ಇನ್ನೊಮ್ಮೆ ಚೆನ್ನಾಗಿ ತಿರುವಿಡಿ. ಒಂದು ತಟ್ಟೆಗೆ ಸ್ವಲ್ಪ ತುಪ್ಪ ಸವರಿ, ಮಾಡಿಟ್ಟ ಮಿಶ್ರಣ ಸುರುವಿಕೊಂಡು ಬೇಕಾದ ಆಕಾರದಲ್ಲಿ ಕತ್ತರಿಸಿ.
ಈಗ ಸಿಹಿ ಶೇಂಗಾ ಕೊಬ್ಬರಿ ಬರ‍್ಪಿ ಸವಿಯಲು ಸಿದ್ದವಾಗಿದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: