ಕವಿತೆ: ನಮ್ಮ ಬವ್ಯತೆಯ ಬಾರತ

– ಮಹೇಶ ಸಿ. ಸಿ.

ಹಲವು ಬಾಶೆಗಳ ಒಂದು ದೇಶ
ಏಕತೆ ಸಾರೋ ಬಾರತ
ಹಲವು ಸಂಸ್ಕ್ರುತಿಯ ನೆಲೆವೀಡು
ನಮ್ಮ ಬವ್ಯತೆಯ ಬಾರತ

ಮಹಾ ಕವಿಗಳ ಕಾವ್ಯಗುಚ್ಚ
ಕಾವ್ಯಮಯವಿದು ಬಾರತ
ಹಲವು ದರ‍್ಮಗಳ ಒಂದು ಒಕ್ಕೂಟ
ದರ‍್ಮಮಿಲನ ಈ ಬಾರತ

ಶ್ರೇಶ್ಟ ಶಿಲ್ಪಗಳ ಕಲೆಗಳ ತೊಟ್ಟಿಲು
ಶಿಲ್ಪಿಗಳ ತವರು ಬಾರತ
ಪವಿತ್ರ ನದಿಗಳ ಉಗಮ ಸ್ತಾನ
ನಮ್ಮ ದೇಶ ಬಾರತ

ಹಲವು ಬಣ್ಣಗಳ ಸಮ್ಮಿಲನವನು
ದ್ವಜದಲಿ ತೋರುವ ಬಾರತ
ವಿಶ್ವಕೆ ಶಾಂತಿಯ ಪಾಟವ ಕಲಿಸಿದ
ಗಾಂದಿಯ ನಾಡಿದು ಬಾರತ

( ಚಿತ್ರಸೆಲೆ : pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications