ಕವಿತೆ: ಬೊಗಸೆ ಪ್ರೀತಿ
ಹಾಲ ಕೆನಯಂತೆ ಅವಳ ಕೆನ್ನೆ
ಇದೆ ಅವಳ ಗಲ್ಲದಳೊಂದು ಕಪ್ಪು ಚಿನ್ಹೆ
ಕಣ್ಣಲ್ಲಿದೆ ಪ್ರೀತಿಯ ಸನ್ನೆ
ಅದೇಕೋ ಕೇಳುತಿಲ್ಲ ನನ್ನ ಮನಸು ನನ್ನ ಮಾತನ್ನೇ
ನಕ್ಕರೆ ಮೊಗವದು ಚಂದ್ರನ ಸೊಗಸು
ಅತ್ತರೆ ಇವಳು ಅರಗಿಣಿಯ ಕೂಸು
ತುಳಸಿ ಪತ್ರೆಯಶ್ಟೆ ಶುದ್ದ ಈಕೆಯ ಮನಸು
ಗರಿ ಬಿಚ್ಚಿ ನವಿಲಿನಂತೆ ಕುಣಿವುದವಳ ಕನಸು
ಹೂ ಎಂದುಬಿಡು ನೀ ಒಮ್ಮೆ
ನಾನಾಗುವೆ ನಿನ್ನ ಬೆರಳಿಗೆ ಕಾಲುಂಗುರ
ನೀ ಒಪ್ಪಿದರೆ ಒಟ್ಟಿಗೆ ಕೂತು ಹುಡುಕಬಹುದು
ಅಂಗಳದಲಿ ಮುಂಬರುವ ಯುಗಾದಿಯ ಚೆಂದಿರ
ಹೇಳು ಚಲುವೆ ನಾ ಹೇಗೆ ಮರೆಯಲಿ
ನೀ ಕೈ ಹಿಡಿದು ದಾಟಿದ ದಾರಿಯನ್ನು
ಇಟ್ಟ ಹೆಜ್ಜೆಗಳಲ್ಲ ಹೇಳುತಿವೆ ನಮ್ಮಿಬ್ಬರ ಹೆಸರನ್ನು
ಕೆಟ್ಟ ಊರಿದು ನಗುತಿದೆ ನೋಡಿ ನನ್ನನ್ನು
ಬೇಡವೆಂದರೂ ಬಯಸಿದೆ ಹ್ರುದಯ ನಿನ್ನದೇ ನೆರಳನ್ನು
ನೀನೆ ಹೇಳು, ನಾ ಹೇಗೆ ಒಪ್ಪಿಸಲಿ ನನ್ನ; ತಿಳಿದು ನೀ ಇನ್ನಿಲ್ಲವೆಂಬುದನ್ನು
ಮುರಿದು ಬಿದ್ದ ಪ್ರೀತಿಗೆ
ಮರೆಯಲಾಗದ ಮುತ್ತಿನ ಗುರುತನಿತ್ತು
ನನಗೂ ತಿಳಿಯದಂತೆ ಇಂದೂ ಇರುವಳು
ನನ್ನೊಳಗೆ ಹಾಗೆ ಸಣ್ಣ ಸುಳಿವೂ ನೀಡದೆ
ಮರುಗದಿರದೆ ಮನಸು ಮರಳಿ ಸಿಗದ ಬೊಗಸೆ ಪ್ರೀತಿಗೆ
( ಚಿತ್ರ ಸೆಲೆ: pxhere.com)
ಇತ್ತೀಚಿನ ಅನಿಸಿಕೆಗಳು