ಕವಿತೆ: ಸುಂದರ ಮಲೆನಾಡು

– ಮಹೇಶ ಸಿ. ಸಿ.malenadu

(ಬರಹಗಾರರ ಮಾತು: ಮುಂಜಾನೆಯಲ್ಲಿ ಸುಂದರ ಮಲೆನಾಡನ್ನು ನೋಡುತ್ತಾ ಮನದಲ್ಲಿ ಮೂಡಿದ ಪದಗಳನ್ನು ಕವಿತೆಯ ರೂಪದಲ್ಲಿ ನಿಮ್ಮ ಮುಂದೆ ಇಡುತ್ತಿದ್ದೇನೆ.)

ಇಣುಕಿ ನೋಡುತ್ತಿದ್ದ
ಬಾನ ತೆರೆ ಸರಿಸಿ ಸೂರ‍್ಯ
ರಾತ್ರಿ ಸುರಿದ ಮಳೆಯು
ತಂಪು ಮಾಡಿತ್ತು ಇಳೆಯ
ಮನವು ನಲಿಯುವುದ ಕಂಡು
ಕುಡಿದಂತೆ ಬಾಸವಾಗಿದೆ ಸುದೆಯ

ತಂಗಾಳಿಗೆ ಮೈಯೊಡ್ಡಿ
ವಿರಮಿಸಿದೆ ತನುವು
ಹೊಸತನವು ನೆನಪಾಗಿ
ಕುಶಿಯಲ್ಲಿ ನಲಿದಿದೆ ಈ ಮನವು
ಮುಂಜಾವಿನ ಸೆಳೆತದಿಂದ
ರೋಮಾಂಚನ ಕಣ ಕಣವು

ಸುಂದರ ಈ ಮುಂಜಾವಿನಲಿ
ನವಿರಾಗಿದೆ ಇಳೆಯ ತಂಪು
ಮಂಜಿನ ಹೊದಿಕೆಯ ಹೊದ್ದ
ಬೆಟ್ಟ ಗುಡ್ಡಗಳ ಜೋಂಪು
ಕಣ್ಮನವ ಸೆಳೆಯುತಿದೆ
ಮಲೆನಾಡಿನ ವನತೋಪು

( ಚಿತ್ರಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: