ಸೌತೆಕಾಯಿ ಉಪ್ಪಿನಕಾಯಿ

– ಸವಿತಾ.

ಬೇಕಾಗುವ ಸಾಮಾನುಗಳು

ಸೌತೆಕಾಯಿ – 2
ಸಾಸಿವೆ – 1 ಚಮಚ
ಮೆಂತೆ ಕಾಳು – 1 ಚಮಚ
ಬೆಳ್ಳುಳ್ಳಿ – 1 ಗಡ್ಡೆ
ಎಣ್ಣೆ – 2 ಚಮಚ
ಉಪ್ಪು – ರುಚಿಗೆ ತಕ್ಕಶ್ಟು
ಒಣ ಕಾರ 2-3 ಚಮಚ
ಅರಿಶಿಣ – ಸ್ವಲ್ಪ
ನಿಂಬೆ ಹಣ್ಣು – 1
ಬೆಲ್ಲ – 1/2 ಅತವಾ 1 ಚಮಚ

ಮಾಡುವ ಬಗೆ

ಸೌತೆಕಾಯಿ ಕಾಯಿ ತೊಳೆದು, ನೀರು ಆರಿದ ಬಳಿಕ ಸಣ್ಣ ಗೆ ಕತ್ತರಿಸಿ. ಆಮೇಲೆ ಉಪ್ಪು, ಅರಿಶಿಣ, ಒಣ ಕಾರದ ಪುಡಿ ಸೇರಿಸಿ ಇಟ್ಟುಕೊಳ್ಳಿ. ಬೆಳ್ಳುಳ್ಳಿ ಗಡ್ಡೆ ಒಡೆದು, ಎಸಳು ಮಾಡಿ (ಸಿಪ್ಪೆ ಹಾಗೇ ಇರಲಿ) ಸಾಸಿವೆ, ಮೆಂತೆ ಕಾಳು, ಕೂಡಿಸಿ ಕಲ್ಲಿನಲ್ಲಿ ಅರೆದು ಪುಡಿ ಮಾಡಿರಿ. ಎಣ್ಣೆ ಕಾಯಿಸಿ, ಈ ಬೆಳ್ಳುಳ್ಳಿ ಮಿಶ್ರಣ ಹಾಕಿ ಒಲೆ ಆರಿಸಿ. ಬಿಸಿ ಎಣ್ಣೆಯಲ್ಲಿ ತಿರುಗಿಸಿದ ನಂತರ ಉಪ್ಪು, ಕಾರ, ಅರಿಶಿಣ ಬೆರೆಸಿದ ಸೌತೆಕಾಯಿ ಹಾಕಿ. ನಿಂಬೆ ರಸ, ಬೆಲ್ಲ ಸೇರಿಸಿ. ಬೇಕೆನಿಸಿದರೆ ನಿಮ್ಮ ರುಚಿಗೆ ತಕ್ಕಂತೆ ಉಪ್ಪು ಮತ್ತು ಕಾರ ಹಾಕಿ ಚೆನ್ನಾಗಿ ಕಲಸಿ ಇಟ್ಟುಕೊಳ್ಳಿ. ಈಗ ತಾಜಾ ದಿಡೀರ್ ಸೌತೆಕಾಯಿ ಉಪ್ಪಿನಕಾಯಿ ಸವಿಯಲು ಸಿದ್ದ . ಪ್ರಿಡ್ಜ್‌ನಲ್ಲಿಟ್ಟರೆ ಎರಡು ದಿನ ತಿನ್ನಬಹುದು. ಊಟದ ಜೊತೆ ನೆಂಚಿಕೊಂಡು ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: