ಹನಿಗವನಗಳು

– ವೆಂಕಟೇಶ ಚಾಗಿ.

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

*** ಸಾಕ್ಶಿ***

ಮತಹಾಕಲು
ನೀವು ಕೊಡಬಹುದು
ಕುಕ್ಕರು ಮಿಕ್ಸಿ
ನಮ್ಮ ಅಬಿವ್ರುದ್ದಿ
ನಿಮ್ಮಿಂದ ಸಾದ್ಯವೇ
ಯಾರು ಸಾಕ್ಶಿ

***ಬುತ್ತಿ***

ಯಾರೂ ತರಲಿಲ್ಲ
ಬರುವಾಗ ಬುತ್ತಿ
ಇರುವುದೆಲ್ಲಾ ನಮ್ಮದೇ
ಎನ್ನುತಿಹರಲ್ಲ
ಒತ್ತಿ ಒತ್ತಿ

***ಗಾಳ***

ವಿಶಾಲವಾದ ಸಾಗರದಲ್ಲಿ
ಮೀನುಗಳಿಗೆ ಬರವೇ
ಹಿಡಿಯಲು ಒಂದೇ ಒಂದು
ಆಮೀಶ ಸಾಕು
ಸಿಕ್ಕಿಸಲು ಗಾಳಕ್ಕೆ

***ದೂಳು***

ಅವರು
ಬಂದು ಹೋದರೆ
ಉಳಿಯುವುದು
ಮೂರು ನಾಲ್ಕು ದೂಳು
ಎಂದಿಗೂ ಅಳಿಯಲೇ ಇಲ್ಲ
ಬಡವರ ಗೋಳು

***ಸಂಪತ್ತು***

ಎಲ್ಲರಿಗೂ ಗೊತ್ತು
ಅವರ ಸಂಪತ್ತು ಅವರಿಗೆ
ಹೇಗೆ ಬಂತು ಎಂದು
ಸುಮ್ಮನಿದ್ದಾರೆ
ಇಲ್ಲದ ಆಪತ್ತು ಏಕೆ ಎಂದು

***ಸಾಲಗಾರ***

ನಾನು ಸಾಲಗಾರನಲ್ಲ
ಎನ್ನುತ್ತ ನೀಗಿದ ಆತ
ಉಚಿತ ಪಡೆದು
ಕೊನೆಗೂ ಸಾಲಕ್ಕೆ ಸೋತ

(ಚಿತ್ರಸೆಲೆ : professionalstudies.educ.queensu.ca )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: