ಮಾಡಿ ಸವಿಯಿರಿ ಸಿಹಿ ಗೋದಿ ಹುಗ್ಗಿ
– ಸುಹಾಸಿನಿ ಎಸ್.
ಗೋದಿ ಹುಗ್ಗಿಯು ಹೆಚ್ಚಾಗಿ ಉತ್ತರ ಕರ‍್ನಾಟಕದ ಬಾಗದಲ್ಲಿ ಮಾಡುವ ಒಂದು ಸಿಹಿ ಅಡುಗೆ. ಹಬ್ಬ ಇಲ್ಲವೇ ಮನೆಯ ಯಾವುದೇ ಸಂತೋಶಕೂಟಕ್ಕೂ ಮಾಡುವ ಹುಗ್ಗಿ ಇದು. ಗೋದಿ ಹುಗ್ಗಿಯನ್ನು ನಾನಾ ರೀತಿಯಲ್ಲಿ ಮಾಡುವರು. ಗೋದಿಯನ್ನ ಕುಟ್ಟಿ ಹುಗ್ಗಿ ಮಾಡಬಹುದು ಅತವಾ ಪಾಲಿಶ್ ಹುಗ್ಗಿಗೋದಿಯಿಂದಲೂ ಮಾಡಬಹುದು. ಹುಗ್ಗಿ ಮಾಡಿದ ಮರುದಿನ, ಇದರ ರುಚಿಯು ಇಮ್ಮಡಿಯಾಗಿ, ಮರುದಿನ ಸವಿಯಲು ಕೂಡಾ ಚೆನ್ನಾಗಿರುತ್ತದೆ.
ಏನೇನು ಬೇಕು
- ಹುಗ್ಗಿಗೋದಿ / ಗೋದಿ ಅಕ್ಕಿ – 1 ಬಟ್ಟಲು
- ಬೆಲ್ಲ – 1 ಅತವಾ 1-1/4 ಬಟ್ಟಲು
- ಒಣ ಕೂಬ್ಬರಿ – ಸ್ವಲ್ಪ
- ಗಸಗಸೆ – 1/2 ಚಮಚ
- ಗೋಡಂಬಿ, ಬದಾಮ್- – 6-7
- ಏಲಕ್ಕಿ, ಜಾಯಿಕಾಯಿ- ಸ್ವಲ್ಪ
- ನೀರು – 4-5 ಬಟ್ಟಲು
- ತುಪ್ಪ – 2-3 ಚಮಚ
ಮಾಡುವ ಬಗೆ
1) ಹುಗ್ಗಿಯನ್ನು ಮಾಡುವ ಹಿಂದಿನ ದಿನ ರಾತ್ರಿ ಹುಗ್ಗಿಗೋದಿಯನ್ನು 2-3 ಸಲ ಚೆನ್ನಾಗಿ ತೂಳೆದು, ನೀರು ಹಾಕಿ ರಾತ್ರಿಯೆಲ್ಲಾ ನೆನೆಯಲು ಬಿಡಿ.
2) ಮರುದಿನ ಹುಗ್ಗಿಗೋದಿಯನ್ನು ಮತ್ತೂಂದು ಸಲ ತೂಳೆದು, ಕುಕ್ಕರ್ ನಲ್ಲಿ 1 ಬಟ್ಟಲು ಹುಗ್ಗಿಗೋದಿ ಮತ್ತು 4-5 ಬಟ್ಟಲು ನೀರು ಹಾಕಿ 8 ವಿಶಲ್/ಸೀಟಿ ಮಾಡಿಸಿ.
3) ಕುಕ್ಕರ್ ಕೆಳಗಿಳಿಸಿ ತಣ್ಣಗಾದ ನಂತರ ಗೋದಿ ಬೆಂದಿದೆಯೇ ಎಂದು ನೋಡಬೇಕು. ಬೆಂದಿಲ್ಲವಾದರೆ ಇನ್ನೊಂದೆರಡು ಬಾರಿ ಸೀಟಿ ಮಾಡಿಸಿ. (ಮತ್ತೆ ಸೀಟಿ ಬೇಡವೆನ್ನಿಸಿದರೆ, ಮಿಕ್ಸಿಯಲ್ಲಿ ತೀರಾ ನುಣ್ಣಗಾಗದಂತೆ ತುಸು ಉರುಟಾಗೇ(ತರಿ) ಇರುವಂತೆ ರುಬ್ಬಿಕೊಳ್ಳಿ. ಮಿಕ್ಸಿ ಮಾಡಿದರೆ 3 ಮತ್ತು 4ನೇ ಸ್ಟೆಪ್ / ಪಾಯಿಂಟ್ ನಲ್ಲಿ ತಿಳಿಸಿರುವದನ್ನು ಮಾಡುವುದು ಬೇಕಿಲ್ಲ. 5ನೇ ಸ್ಟೆಪ್ ನಿಂದ ಶುರು ಮಾಡಿ.)
4) ಈಗ ಮ್ಯಾಶರ್ ನಿಂದ ಗೋದಿಯನ್ನು ಚೆನ್ನಾಗಿ ಮ್ಯಾಶ್ ಮಾಡಬೇಕು.
5) ಮ್ಯಾಶ್ ಮಾಡಿದ / ಮೆತ್ತಗೆ ಉರುಟಾಗಿರುವ ಹುಗ್ಗಿಗೋದಿಗೆ ಸಮ ಪ್ರಮಾಣ ಅತವಾ (ಸಿಹಿ ಜಾಸ್ತಿ ಬೇಕೆನಿಸಿದರೆ ) ಕಾಲು ಪ್ರಮಾಣ ಜಾಸ್ತಿ ಬೆಲ್ಲ ಹಾಕಿ ನಂತರ ಕೈಯಾಡಿಸಿ (ಕೈಯಾಡಿಸುವುದು ಬಿಟ್ಟರೆ ಹುಗ್ಗಿ ತಳ ಹಿಡಿಯುತ್ತದೆ), ಬೆಲ್ಲ ಕರಗಿದ ಮೇಲೆ ಒಣ ಕೂಬ್ಬರಿ ಹಾಕಿ.
6) ಗಸಗಸೆಯನ್ನು ಹುರಿದು, ಏಲಕ್ಕಿ ಮತ್ತು ಜಾಯಿಕಾಯಿಯೊಂದಿಗೆ ಅರೆದು ಪುಡಿ ಮಾಡಿ ಅದಕ್ಕೆ ಹಾಕಿ. ತುಪ್ಪದಲ್ಲಿ ಹುರಿದ ಗೋಡಂಬಿ, ತುಪ್ಪ ಅತವಾ ಹಾಲಿನ ಜೊತೆ ಸವಿಯಲೂಬಹುದು.
ಇತ್ತೀಚಿನ ಅನಿಸಿಕೆಗಳು