ಕವಿತೆ: ಹೆತ್ತವಳು
ತಿಂಗಳ ಬೆಳಕು
ಮುದ ನೀಡುತಿತ್ತು
ಕಂದಮ್ಮಗೆ ತೋರುತಾ
ನೀಡಿದಳು ತುತ್ತು
ಓದಿ ಬಂದ ಮಗುವ
ಅಪ್ಪಿಕೊಳ್ಳುವಳು ಅವಳು
ಮಗುವಿನ ನಗುವ
ನೋಡಿ ನಲಿವವಳು ಅವಳು
ಬಡತನದ ಬೇಗೆಯಲಿ
ಬೆಂದರೂ ದಿನವೂ
ಮಕ್ಕಳಿಗೆ ಮಾತ್ರ
ಬಡಿಸಿದಳು ಒಲವು
ಆಟದಿ ಗಾಯಗೊಂಡರೆ
ಕೊಡುವಳು ಪೆಟ್ಟು
ಆಕೆಯದೇನಿದ್ದರೂ
ಅಕ್ಕರೆಯ ಸಿಟ್ಟು
ಒಂದೇ ಕೂಗಿಗೆ
ಓಡೋಡಿ ಬರುವವಳು
ಸಾಟಿಯಿಲ್ಲ ಇವಳಿಗೆ
ಇವಳು ಹೆತ್ತವಳು.
(ಚಿತ್ರ ಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು