ಹನಿಗವನಗಳು

– ವೆಂಕಟೇಶ ಚಾಗಿ.

*** ಕಳ್ಳತನ ***

ಕಳ್ಳನೊಬ್ಬ ಒಂದು ರಾತ್ರಿ
ಕದ್ದನೊಂದು
ರೇಶ್ಮೆ ಸೀರೆ
ಪದೇ ಪದೇ ಅಂಗಡಿಗೆ
ಕನ್ನ ಹಾಕಿದ
ಕಾರಣ
ಹೆಂಡತಿಯಿಂದ
ಬಣ್ಣ ಬದಲಿಸುವ ಕರೆ

*** ಸಾಹುಕಾರ ***

ಗಂಡ ಹೇಳಿದ ಹೆಂಡತಿಗೆ
ನಿನ್ನ ಪಡೆದ ನಾನೇ
ಅತಿ ದೊಡ್ಡ ಸಾಹುಕಾರ
ಹೆಂಡತಿ ಬೇಡಿಕೆ ಇಟ್ಟಳು
ಹಾಗಾದರೆ ಕೊಟ್ಟುಬಿಡಿ
ಮನೆಯ ಸರ‍್ವಾದಿಕಾರ

*** ಕವಿ ***

ಕೆಲ ಕವಿಗಳಿಗೆ
ಕಂಡ ಬರಹವೆಲ್ಲವೂ
ನನಗೆ ಹೊಳೆದಿತ್ತು
ಎನ್ನುವ ಕಯಾಲಿ
ಏಕೆಂದರೆ
ಅವರ ತಲೆಯಾಗಿದೆ
ಈಗ ಕಾಲಿ

*** ಕಾಲ ***

ಎಂತಾ ಕಾಲ ಬಂತಪ್ಪ
ಚಿಕ್ಕ ವಯಸ್ಸಿನಲ್ಲೇ ಬರ‍್ತಿವೆ
ಬಿಪಿ ಶುಗರ‍್ರು ಹಾರ‍್ಟು
ಬೇಗ ಮುಗಿಯುತ್ತಿದೆ
ಬೂಮಿಯ ಮೇಲಿನ
ನಾಟಕದ ಪಾರ‍್ಟು

(ಚಿತ್ರ ಸೆಲೆ: ecosalon.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: