ಕವಿತೆ: ಕಾದಿರುವೆ ಗೆಳತಿ

– ಕಿಶೋರ್ ಕುಮಾರ್.

ತಿಂಗಳ ಬೆಳಕು ಮೆಲ್ಲನೆ ಜಾರಿ
ಸೇರಿತು ನಿನ್ನಯ ಕಿರುನಗೆಯ ದಾರಿ
ಬರಿಸಿತು ಒಲವಿನ ಜೋರು ಮಳೆಯ
ತರಿಸಿತು ಈಗಲೇ ಮಾಗಿಯ ಚಳಿಯ

ಇರುಳೇನು ಬೆಳಕೇನು ಗುರುತಿಸಲಾರೆ
ಗುರುತಿಸಿ ಮಾಡುವುದೇನಿದೆ ನೀರೆ
ನನ್ನೆದೆಯ ತುಂಬಿದೆ ಒಲವಿನ ದಾರೆ
ನಲಿಯುತಲಿ ಬಳಿ ಬಂದು ನನ್ನ ಸೇರೆ

ಗುಬ್ಬಚ್ಚಿ ಚಿಲಿಪಿಲಿ ಗುಂಡಿಗೆಯಲ್ಲಿ
ಹೊಸತಿದು ಈ ನನ್ನ ಬದುಕಿನಲ್ಲಿ
ಬಿಡುಗಡೆಗೊಳಿಸೆಯ ಈ ಸೆರೆಯ
ಕಾಯುತಲಿರುವ ನಿನ್ನಯ ಇನಿಯ

ನಲಿವಿನ ಅಡುಗೆಯ ಮಾಡಿರುವೆ ಗೆಳತಿ
ಬೇಕಿರುವುದೊಂದೇ ಅದು ನಿನ್ನ ಅಣತಿ
ಒಲವಿನ ಕರೆಯ ಕೇಳು ಒಂದು ಸರತಿ
ತಿಳಿದರೆ ನೀನಾಗೇ ಓಡೋಡಿ ಬರುತಿ

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: