ಕಿರುಗವಿತೆಗಳು
– ನಿತಿನ್ ಗೌಡ.
ಯೋಚನೆಗಳ ಕೈದಿ
ಆಗದಿರು ನೀ ಯೋಚನೆಯ ಕಂಬಿಗಳ
ಹಿಂದಿನ ಕೈದಿ..
ಕಾಯದು ಸಮಯ ಯಾವುದಕು;
ನಿಲ್ಲದಿರು, ಗತದ ಪಂಜರದಲಿ ಬಂದಿಯಾಗಿ..
ಬದುಕು ನೀ, ಸಾಗು ನೀ ಇಂದಿನ ಇರುವಿಕೆಯಲಿ;
ಕಾಣುವುದು ಆಗ, ಬಿಡುಗಡೆಯ ಹಾದಿ
********
ಪಡೆದು ಕೊಳ್ಳಬಹುದೇನು
ನೋವ ಅರಿಯದವ
ನಲಿವ ಗುರುತಿಸುವನೇನು!
ಸಿರಿತನದ ದಾಸನಾದವ,
ಬಡತನವ ಅರಿಯುವನೇನು?
ಸೋಲು ಅನುಬವಿಸದೆ,
ಗೆಲುವಿನ ನಲಿವ ಕಾಣಲಾದೀತೇನು?
ಕಳೆದುಕೊಳ್ಳದೆ ಬದುಕಲಿ,
ಪಡೆದು ಕೊಳ್ಳಬಹುದೇನು!
********
ಕನಸು
ಕನಸು ಕಾಣಲು ಸುಂಕವಿಲ್ಲ,
ಜಿಪುಣತನವೇಕೆ ಅದರಲಿ!
ಕಾಣು ನೀ ಕನಸನು, ಹಿರಿದಾಗಿ;
ನೀಡು ನೀ ಮನಸನು, ಪಲವ ಬಯಸದೆ;
ಅದ ಸಾಕಾರಗೊಳಿಸಲು..
ಸರಿಹೋಗದೆ ಇಶ್ಟು? ಸಾರ್‍ತಕತೆಯ ಬದುಕ ಪಡೆಯಲು!
(ಚಿತ್ರಸೆಲೆ: copilot.mocrosoft.com )
ಇತ್ತೀಚಿನ ಅನಿಸಿಕೆಗಳು