ಕವಿತೆ: ಎಲೆಮರೆಯ ಕಾಯಿ
– ಕೌಸಲ್ಯ.
ಎಲೆಯು ಸೆರಗ ಹಾಸಿತ್ತು
ನೆರಳ ಕತ್ತಲ ನಡುವೆ
ಜಗವ ನೋಡದಂತೆ
ನೋಡಿಯೂ ಸುಮ್ಮನಿರುವಂತೆ
ಮರೆಯಾಯಿತು ಕಾಯಿ
ಸುತ್ತಲಿರುವ ತರಗೆಲೆ ನುಡಿದಿತ್ತು
ಜಾಗಬಿಡಿ ಜಾಗಬಿಡಿ
ಕಾಯಿಯ ಎದುರಿದ್ದ ಎಲೆಗೆ ನಾಚಿಕೆ
ಅಸಹ್ಯ, ಕಣ್ಣೀರಿಟ್ಟಿತು
ಈ ಪ್ರಪಂಚದ ತಾರತಮ್ಯದ ಮೇಲೆ
ರವಿತೇಜ ಇಣುಕಿದ ಹುಡುಕಿದ
ಸಿಗದಂತೆ ಕಾಣದಂತೆ ಮರದ ಪಲ
ಎಲೆಎಲೆಯ ನಡುವೆ ಅವಿತಿತ್ತು
ನನ್ನ ಪಲ ಅವ ತಿನ್ನಲಿ
ನನ್ನದೇನಿಲ್ಲವೆಂದು
ಬಿರುಗಾಳಿ ಮಳೆಗಂಜದ ಕಾಯಿ
ಗಟ್ಟಿಯಾಗಿ ನಿಂತಿತ್ತು
ತನಗಾದ ತುಳಿತಕೆ ಕುದಿಯದೆ
ಕಾಯಿ, ನಗುತಲೇ ಇತ್ತು
ಎಲೆಮರೆಯಕಾಯಿ.
(ಚಿತ್ರ ಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು