ಹುರಿದ ಮಕಾನಾ ಮಿಕ್ಸ್

– ಸವಿತಾ.

ಬೇಕಾಗುವ ಸಾಮಾನುಗಳು

ಕಮಲದ ಬೀಜ (ಮಕಾನಾ) – 1/2 ಬಟ್ಟಲು
ಕಡಲೇ ಬೀಜ – 2 ಬಟ್ಟಲು
ಗೋಡಂಬಿ – 1/2 ಬಟ್ಟಲು
ಬಾದಾಮಿ – 1/4 ಬಟ್ಟಲು
ಒಣ ದ್ರಾಕ್ಶಿ – 1/2 ಬಟ್ಟಲು
ಹಸಿಮೆಣಸಿನ ಕಾಯಿ – 3
ಕರಿಬೇವು ಎಲೆ – 30
ಸಾಸಿವೆ – 1/4 ಚಮಚ
ಜೀರಿಗೆ – 1/4 ಚಮಚ
ಒಣ ಮಾವಿನ(ಆಮ್‌ಚೂರ್) ಪುಡಿ – 1/4 ಚಮಚ
ಗರಮ್ ಮಸಾಲೆ – 1/2 ಚಮಚ
ಉಪ್ಪು – ರುಚಿಗೆ ತಕ್ಕ ಶ್ಟು
ಅರಿಶಿಣ – ಸ್ವಲ್ಪ
ಎಣ್ಣೆ – 6 ಚಮಚ

ಮಾಡುವ ಬಗೆ

ಇತ್ತೀಚೆಗೆ ಇಂಟರ್ ನೆಟ್‌ ನಲ್ಲಿ ಮಕಾನಾ ಬಳಸಿ ಮಾಡುವ ತಿಂಡಿಗಳು ಹೆಚ್ಚಿನ ಸದ್ದು ಮಾಡುತ್ತಿವೆ. ಅಪರೂಪ ಎನಿಸಿದ್ದ ಕಮಲದ ಬೀಜದ ಈ ತಿಂಡಿ ಆನ್‌ಲೈನಲ್ಲಿ ಹರಿದಾಡುತ್ತಿರುವ ವಿಡಯೋಗಳಿಂದಾಗೆ ಸಾಕಶ್ಟು ಹೆಸರುವಾಸಿಯಾಗುತ್ತಿದೆ.

ಮೊದಲಿಗೆ ಒಂದು ಬಾಣಲೆ ಕಾಯಲು ಇಟ್ಟು ಒಂದು ಚಮಚ ಎಣ್ಣೆ ಬಿಸಿ ಮಾಡಿ, ಮಕಾನಾ [ಕಮಲದ ಬೀಜ] ಹಾಕಿ ಹುರಿದು ತೆಗೆದು ಇಟ್ಟುಕೊಳ್ಳಿ. ನಂತರ ಕಡಲೇ ಬೀಜ , ಗೋಡಂಬಿ ಮತ್ತು ಬಾದಾಮಿ, ಒಣ ದ್ರಾಕ್ಶಿ ಹುರಿದು ತೆಗೆಯಿರಿ.

ಮತ್ತೆ ಅದೇ ಬಾಣಲೆಯಲ್ಲಿ ಇನನ್ನೊಂದೆರೆಡು ಚಮಚ ಎಣ್ಣೆಗೆ, ಸಾಸಿವೆ ಜೀರಿಗೆ, ಕರಿಬೇವು ನಂತರ, ಹಸಿ ಮೆಣಸಿನ ಕಾಯಿ ಕತ್ತರಿಸಿ ಹಾಕಿ ಹುರಿಯಿರಿ. ಉಪ್ಪು ಅರಿಶಿಣ ಹಾಕಿ. ಹುರಿದ ಬಾದಾಮಿ ಗೋಡಂಬಿ ಒಣ ದ್ರಾಕ್ಶಿ, ಕಡಲೇ ಬೀಜ, ಮಕಾನಾ ಹಾಕಿ ಗರಮ್ ಮಸಾಲೆ ಪುಡಿ, ಆಮ್‌ಚೂರ್ ಪುಡಿ ಹಾಕಿ ಸ್ವಲ್ಪ ಹುರಿದು ತೆಗೆಯಿರಿ.

ಆರೋಗ್ಯಕರ ಹುರಿದ ಮಕಾನಾ ಮಿಕ್ಸ್ ತಯಾರಾಯಿತು. ಇದನ್ನು ಹಾಗೆಯೇ ತಿನ್ನಬಹುದು. ಉಪ್ಪಿಟ್ಟು, ಅವಲಕ್ಕಿಯ ಮೇಲೆ ಹಾಕಿಕೊಂಡು ಸವಿಯಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: