ಗುದುಗಿನ ಹುಗ್ಗಿ

– ಸವಿತಾ.

gadugina huggi, sweet, ಗದುಗಿನ ಹುಗ್ಗಿ, ಸಿಹಿ

ಬೇಕಾಗುವ ಸಾಮಾನುಗಳು

  • ಗೋದಿ ಹಿಟ್ಟು – 1 ಬಟ್ಟಲು
  • ತುಪ್ಪ – 1 ಚಮಚ
  • ಉಪ್ಪು – ಸ್ವಲ್ಪ
  • ಬೆಲ್ಲದ ಪುಡಿ – 5 ಚಮಚ
  • ಏಲಕ್ಕಿ – 2
  • ಲವಂಗ – 2

ಮಾಡುವ ಬಗೆ

ಗೋದಿ ಹಿಟ್ಟಿಗೆ ನೀರು, ತುಪ್ಪ ಮತ್ತು ಸ್ವಲ್ಪ ಉಪ್ಪು ಹಾಕಿ, ಹಿಟ್ಟು ಚಪಾತಿ ಹಿಟ್ಟಿನ ಹದಕ್ಕೆ ಕಲಸಿರಿ. ಚಪಾತಿ ಮಣೆಯ ಮೇಲೆ ಒಂದು ಉಂಡೆಯ ಅಳತೆ ಹಿಟ್ಟು ಹಿಡಿದು, ಕೈಗೆ ತುಪ್ಪ ಸವರಿ ದಪ್ಪ ಶಾವಿಗೆ ಹೊಸೆದುಕೊಳ್ಳಿ. ಒಂದು ಬೆರಳು ಉದ್ದ ಇರಲಿ, ತುಂಡಾದರೂ ನಡೆಯುತ್ತೆ. ಒಂದು ಬಟ್ಟಲು ನೀರು ಕುದಿಸಿ ಅದರಲ್ಲಿ ಶಾವಿಗೆ ಕುದಿಸಿಕೊಂಡು ತೆಗೆದು ಇಟ್ಟುಕೊಳ್ಳಿ.

ಅರ‍್ದ ಬಟ್ಟಲು ನೀರು ಹಾಕಿ ಬೆಲ್ಲದ ಪುಡಿ ಕರಗಿಸಿ. ನಂತರ ಕುದಿಸಿಟ್ಟ ಶಾವಿಗೆ ಸೇರಿಸಿ. ಒಂದು ಚಮಚ ತುಪ್ಪ ಸೇರಿಸಿ ಒಂದು ಕುದಿ ಬರುವವರೆಗೆ ಕುದಿಸಿ ಇಳಿಸಿ. ಸ್ವಲ್ಪ ಏಲಕ್ಕಿ, ಲವಂಗ, ಜಾಯಿಕಾಯಿ, ಗಸಗಸೆ ಹುರಿದು ಪುಡಿ ಮಾಡಿ ಸೇರಿಸಿ. ಹಸಿ ಕೊಬ್ಬರಿ ತುರಿ ಬೇಕಾದರೆ ಸೇರಿಸಿಕೊಳ್ಳಬಹುದು.

(ಚಿತ್ರ ಸೆಲೆ: ಸವಿತಾ)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *