ಆಗದಿರಿ ರಾಹುಲ್, ನರೇಂದ್ರರ ಮಾತಿಗೆ ಮೋಡಿ

– ಜಯತೀರ‍್ತ ನಾಡಗವ್ಡ.

modi-rahul

ಗುಜರಾತ್‍ನಲ್ಲೀಗ ಬಂದಿದೆ ನೆರೆ,
ಜನರ ಕಾಪಾಡುವ ಮುಕ್ಯಮಂತ್ರಿ ಹಯ್ಕಮಾಂಡ್‍ನ ಸೆರೆ,
ಇಂತವರು ದೇಶದ ಪ್ರದಾನಿಯಾದರೆ, ಆಗುವರು ಎಲ್ಲರಿಗೂ ಹೊರೆ!

ಎಲಯ್ ಕನ್ನಡಿಗರೇ! ಆಗದಿರಿ ರಾಹುಲ್, ನರೇಂದ್ರರ ಮಾತಿಗೆ ಮೋಡಿ,
ಚುನಾವಣೆ ಗೆದ್ದ ಮೇಲೆ ಹೋಗುವರು ಹಯ್ಕಮಾಂಡ್ ಬಾಲ ಹಿಡಿದುಕೊಂಡು ಓಡಿ,
ಕನ್ನಡ, ಕರ್‍ನಾಟಕಕ್ಕೆ ಹೋರಾಡಿ,
ಸರಿಸಮಾನತೆಯ ಮಂತ್ರಕ್ಕೆ ದನಿ ಸೇರಿಸೋಣ ಒಗ್ಗೂಡಿ.

ಕನ್ನಡದ ಕಂದನೆ, ಎಲ್ಲರಂತೆ ನೀನಾಗದಿರು ಕುರುಡು ಹಿಂಬಾಲಕ,
ಕುರುಡುತನ ನೀಗಿಸಲು ದರಿಸು ಕನ್ನಡದ ಕನ್ನಡಕ,
ಕರ್‍ನಾಟಕದಿಂದ ಬಾರತ, ಅಂತೆಯೇ ಬಾರತದಿಂದ ಕರ್ನಾಟಕ!

(ಚಿತ್ರ ಸೆಲೆ: rediff.com)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. ನನ್ನ ಅಭಿಪ್ರಾಯವು ಇದೇ.. ಆದರೆ ಈಗಿನ ಯುವ ಜನತೆ ಸಮೂಹ ಸನ್ನಿಗೆ ಒಳಗಾದಂತೆ ಆಡುತ್ತಿದ್ದಾರೆ…

  2. ಸಂತೋಶ ಕುಮಾರ -ನಿಜ.ಕನ್ನಡ,ಕರ‍್ನಾಟಕದ ರಾಜಕೀಯದ ಬಗ್ಗೆ ನಮ್ಮ ನಾಡಿನ ಯುವಕರು ಚಿಂತಿಸಬೇಕಿದೆ.

Jayateerth Nadagouda ಗೆ ಅನಿಸಿಕೆ ನೀಡಿ. Cancel reply

Your email address will not be published. Required fields are marked *