ದೊಡ್ಡಕಲ್ಲು ತಾಣ ಹಿರೇಬೆಣಕಲ್

ಸಂದೀಪ್ ಕಂಬಿ.

Pre-historic_tombs-1

ನಮ್ಮ ಕರ್‍ನಾಟಕದಲ್ಲಿ ಕಲ್ಲುಗಾಲದ ಉಳಿಕೆಗಳ ಹಲವು ತಾಣಗಳು ಸಿಗುತ್ತವೆ. ಅಂತಹ ಒಂದು ತಾಣ ಕೊಪ್ಪಳ ಜಿಲ್ಲೆಯಲ್ಲಿರುವ ಹಿರೇಬೆಣಕಲ್. ಕಲ್ಲುಗಾಲದಿಂದ ಕಬ್ಬಿಣ ಕಾಲದೆಡೆಗೆ ಮಾರ್‍ಪಾಟು ಹೊಂದುತ್ತಿದ್ದ ನಡಾವಳಿಯ ಉಳಿಕೆಗಳಿವು. ಇಂತಹ ನಡಾವಳಿಯ ಮಂದಿ ತಮ್ಮನ್ನು ಅಗಲಿದವರನ್ನು ಹೂಳಲು ಕಟ್ಟಿದ ಗೋರಿಗಳು ಮತ್ತು ಇತರೆ ಕಟ್ಟಡಗಳು ದೊಡ್ಡ ದೊಡ್ಡ ಕಲ್ಲುಗಳಿಂದ ಮಾಡಿರಲಾಗಿರುತ್ತಿತ್ತು. ಆದ್ದರಿಂದ ಈ ಕಾಲವನ್ನು ‘ದೊಡ್ಡಕಲ್ಲುಗಾಲ‘ ಎಂದೂ ಹೇಳಬಹುದು. ಹಿರೇಬೆಣಕಲ್ಲಿನಲ್ಲಿ ಹೀಗೆ ದೊಡ್ಡ ದೊಡ್ಡ ಕಲ್ಲುಗಳಿಂದ ಮಾಡಿದ ಸುಮಾರು 400 ಗೋರಿಗಳಿವೆ.

ದೊಡ್ಡಕಲ್ಲುಗಾಲದ ಹಲವು ಕಟ್ಟಡಗಳಿರುವ ಈ ತಾಣ ಕಲ್ಲು ಬಂಡೆಗಳಿಂದ ತುಂಬಿರುವ ಏಳು ಗುಡ್ದಗಳ ಮೇಲಿದೆ. ಅದಕ್ಕಾಗಿಯೇ ಅಲ್ಲಿನ ಹಳ್ಳಿಗರು ಇದನ್ನು ‘ಏಳು ಗುಡ್ಡಗಳು’ ಎಂದು ಕರೆಯುತ್ತಾರೆ. ‘ಮೋರ್‍ಯರ ಗುಡ್ಡ’ ಎಂಬ ಹೆಸರೂ ಇದೆ. ಇಲ್ಲಿ ಒಂದು ಬತ್ತದ ಕೆರೆ ಮತ್ತು ಹಿಂದಿನ ಕಾಲದ ಬಂಡೆ ಒಡೆಯುವ ತಾಣವೂ ಸಿಗುತ್ತವೆ. ಈ ಕಲ್ಲುಗೋರಿಗಳು ಹಲವು ಬೇರೆ ಬೇರೆ ಅಳತೆಗಳಲ್ಲಿ ಕಾಣಸಿಗುತ್ತವೆ. ಕೆಲವು ಬರೀ 50 ಸೆಂಟಿಮೀಟರಿನಶ್ಟು ಉದ್ದವಿದ್ದರೆ ಇನ್ನೂ ಕೆಲವು ಸುಮಾರು ಹತ್ತು ಅಡಿಗಳಶ್ಟು ಎತ್ತರವಿದೆ. ಈ ಗೋರಿಗಳಿಗೆ ಮೂರುಗೋಡೆಗಳಿದ್ದು ಮೇಲೆ ದೊಡ್ಡ ಚಪ್ಪಡಿ ಕಲ್ಲುಗಳ ಸೂರು ಇದೆ. ಕೆಲವು ಕಟ್ಟಡಗಳಲ್ಲಿ ಕಿಂಡಿಗಳೂ ಇದ್ದು, ನೆಲೆಸುವ ಮನೆಗಳಂತೆ ಕಂಡರೂ ಈ ಕಲ್ಲು ಕೋಣೆಗಳು ಗೋರಿಗಳೇ, ಇಲ್ಲಿ ಮಂದಿ ಇರುತ್ತಿರಲಿಲ್ಲ.

ಕೆಲವು ಬಂಡೆಗಳ ಮೇಲೆ ಅಂದಿನ ಮಂದಿ ಬಿಡಿಸಿದ ಚಿತ್ತಾರಗಳೂ ಕಾಣಿಸುತ್ತವೆ. ಕುಣಿಯುತ್ತಿರುವ, ಬೇಟೆಯಾಡುತ್ತಿರುವ ಮತ್ತು ಕಯ್ದುಗಳನ್ನು ಹಿಡಿದ ಮಂದಿಯ ಚಿತ್ತಾರಗಳು ಇವೆ. ರಂಗೋಲೆಗಳಂತೆ ಕಾಣುವ ಚಿತ್ತಾರಗಳು ಮತ್ತು ಜಿಂಕೆ, ನವಿಲು, ಹಸು, ಎತ್ತುಗಳ ಚಿತ್ರಗಳು ಸಿಗುತ್ತವೆ. ಇಲ್ಲಿ ಸಿಗುವ ಕಲ್ಲಿನ ಡೊಳ್ಳು ಇನ್ನೊಂದು ವಿಶೇಶ. ಸುಮಾರು 2 ಮೀಟರಿನಶ್ಟು ಅಗಲವಿರುವ ಈ ಬಂಡೆಗೆ ಮರದ ತುಂಡಿನಿಂದ ಬಡಿದರೆ ಸುಮಾರು ಒಂದು ಕಿಲೋಮೀಟರ್ ವರೆಗೂ ಸದ್ದಾಗುತ್ತದೆ. ಬಹುಶ, ಕೆಲವು ದಾರ್‍ಮಿಕ ಕೊಂಡಾಟಗಳನ್ನು ಹಮ್ಮಿಕೊಳ್ಳುವ ತಾಣವೂ ಆಗಿದ್ದಿರಬಹುದು.

ಮಡಕೆ ಕುಡಿಕೆಗಳ ಜೊತೆಯಲ್ಲೇ ಕೆಲವು ಕಬ್ಬಿಣದ ಸಲಕರಣೆಗಳೂ ಇಲ್ಲಿ ಸಿಕ್ಕಿವೆ. ಈ ಉಳಿಕೆಗಳು ಸುಮಾರು ಕ್ರಿ.ಪೂ. 800ರಿಂದ ಕ್ರಿ/ಪೂ. 200ರ ವರೆಗಿನವು ಎಂದು ಹೇಳಲಾಗುತ್ತದೆ. ತೆಂಕಣ ಬಾರತದಲ್ಲಿ ಸಿಗುವ ಕಲ್ಲುಗಾಲದ ತಾಣಗಳಲ್ಲಿ ತುಂಬಾ ಮುಕ್ಯವಾದವುಗಳಲ್ಲಿ ಹಿರೇಬೆಣಕಲ್ ತಾಣವೂ ಒಂದು. ಅರಕೆ ನಡೆಸುವ ಅರಿಗರಿಗೆ ಈ ಬಾಗದ ಮಂದಿಯ ಕಲ್ಲುಗಾಲದ ಬಗೆಗಿನ ಮಾಹಿತಿಯನ್ನು ನೀಡಬಲ್ಲುದು. ಮತ್ತು ಸಾಮಾನ್ಯರನ್ನು ನೇರವಾಗಿ ಕಲ್ಲುಗಾಲಕ್ಕೆ ಕರೆದೊಯ್ಯುವ ಅನುಬವವನ್ನು ನೀಡಿ ಮಯ್ ನವಿರೇಳಿಸಬಲ್ಲುದು. ಮನಸೂರೆಗೊಳ್ಳುವ ಈ ತಾಣ ಸರಕಾರದ ಕಡೆಗಾಣಿಕೆಯಿಂದ ಮೆಲ್ಲಗೆ ಅಳಿದು ಹೋಗುತ್ತಿದೆ. ಕಲ್ಲುಗಾಲದಲ್ಲಿ ಚಿನ್ನ-ಬೆಳ್ಳಿಗಳಿರಲಿಲ್ಲ ಎಂಬ ಅರಿವಿಲ್ಲದ ಕೆಲವು ಕಳ್ಳರು, ಇಲ್ಲಿ ಕಡವರ ಸಿಗಬಹುದೆಂಬ ಆಸೆಯಲ್ಲಿ ಹಲವು ಕಟ್ಟಡಗಳನ್ನು ಹಾಳುಗೆಡವಿದ್ದಾರೆ. ಈ ಕೂಡಲೇ ಇದನ್ನು ಕಾಪಾಡಿಕೊಳ್ಳದಿದ್ದರೆ ಈಗಿರುವ ಉಳಿಕೆಗಳೂ ಅಳಿದು ಹೋಗುಬಹುದು.

(ಮಾಹಿತಿ ಮತ್ತು ಚಿತ್ರ ಸೆಲೆ: en.wikipedia.org)Categories: ನಡೆ-ನುಡಿ

ಟ್ಯಾಗ್ ಗಳು:, , , , , , , , , , , , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s