ಬೆಳಗಿನ ಸೊಬಗು

ಕುಮಾರ ದಾಸಪ್ಪ

April_dawn

ಉದಯಿಸಿದನು ರವಿಯು ಮೂಡಣದಿ

ಹಕ್ಕಿಗಳ ಕಲರವು ಮೊಳಗಿದೆ ದೂರದಿ|

ಹೊಂಗಿರಣಗಳು ಬೀಳುತಿಹವು ಹಸಿರ ರಾಶಿಯ ಮೇಲೆ

ತ೦ಗಾಳಿಯು ತ೦ದಿಹದು ಮನಸಿಗೆ ನೂರೆ೦ಟು ನಲಿವುಗಳನು|

ಮಕರಂದವ ಹೀರಲು ಹಾರಿಹಾರಿ ದುಂಬಿಯೊಂದು

ಬೆಚ್ಚಿ ಬೆರಗಾಗಿಹದು ಹೂ ರಾಶಿಯ ಕಂಡು|

ರಾತ್ರಿಯ ಮುಂಗಾರು ಮಳೆಗೆ ಮಿಂದು

ಕಂಗೊಳಿಸಿಹವು ತೆಂಗು ಬಾಳೆಗಳು ಮದುಮಗಳಂತೆ|

ಪುಟ್ಟ ಹಸುವಿನ ಕರುವೂಂದು ಹಸಿವ ನೆನೆದು

ಗೂಟಕ್ಕೆ ಕಟ್ಟಿದ ಜಾಗದಿ ಚಂಗನೆ ಹಾರುತಿಹದು ಅವ್ವನ ಕಂಡು|

ಕೆಂಜಿಗೆಗಳು ಹೊರಟಿವೆ ಸಾಲು ಸಾಲಾಗಿ ಯೋದರಂತೆ

ಒಂದರ ಹಿಂದೆ ಮತ್ತೊಂದಂತೆ ತೆಂಗಿನ ಮರದಲಿ ಗುರಿಯ ಸಾದನೆಗೆ|

ಇವುಗಳ ಚೆಲುವುವನು ಸವಿಯುತ ಸಾಗಿಹನು

ಕಾಣಿಯಾಲನು ಓಣಿಗಳ ನಡುವೆ|

ಹೊತ್ತಾಗುತಿಹದು, ದಾರಿ ಸಾಗುತಿಹದೆಂದು

ಮನದಲಿ ಬೂ ತಾಯಿಯನು ನೆನೆದು ಉಳುವುದಕೆ|

(ಚಿತ್ರ: ವಿಕಿಮೀಡಿಯಾ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: