ಸೀರಲೆಗಳಿಂದ ಮಿಂಚು

ವಿವೇಕ್ ಶಂಕರ್‍.

harvestingarray

ನಮ್ಮ ಸುತ್ತಮುತ್ತ ಬಳಕೆಯಾಗುವ ಹಲವು ಚೂಟಿಗಳಿಂದ ಸೀರಲೆಗಳು (microwaves) ಹೊರಹೊಮ್ಮುವುದು ನಮಗೆ ಗೊತ್ತಿರುವಂತದು. ಎತ್ತುಗೆಗೆ: ಅಟ್ಟಿಗ (satellite), ವಯ್-ಪಯ್ (Wi-Fi) ಮುಂತಾದವು. ಈ ಸೀರಲೆಗಳಿಂದ ಹಲವು ತಿಳಿಹವನ್ನು ಕಳುಹಿಸಲಾಗುತ್ತದೆ.

ಆದರೆ ಕೆಲವೊಮ್ಮೆ ಈ ಸೀರಲೆಗಳು ಎಲ್ಲೂ ಹೋಗದೆ ಗೊಡ್ಡು ಆಗುವ ಸಾದ್ಯತೆ ಕೂಡ ಇದೆ. ಈ ಸೀರಲೆಗಳನ್ನು ಗೊಡ್ಡು ಹೋಗದ ಹಾಗೆ ಇವುಗಳನ್ನು ಉಪಯೋಗಿಸಿ ಮಿಂಚನ್ನು ಉಂಟುಮಾಡುವ ಕೆಲಸ ಡ್ಯೂಕ್ ಕಲಿಕೆವೀಡಿನ ಅರಕೆಗಾರರು (researchers) ಮಾಡಿದ್ದಾರೆ. ಇವರ ಅರಕೆ ಬಗ್ಗೆ ಕೊಂಚ ತಿಳಿದುಕೊಳ್ಳೋಣ.

ಇವರು ಮಾಡಿರುವ ತಂತಿಯಿಲ್ಲದ ಚೂಟಿಯು ಕಸುವು-ಕೊಯ್ಲಿನ (energy-harvesting) ಅಳವು ಹೊಂದಿದೆ. ಈ ಚೂಟಿಯ ಸರಕು ಸುತ್ತಣದಲ್ಲಿ (environment) ದೊರೆಯುವುದಿಲ್ಲ, ಇದೊಂದು ಮಾಡಿದ, ಹೊಮ್ಮಿಸಿದ-ಸರಕು (meta-material). ಈ ಬಗೆಯ ಸರಕುಗಳು ತಮ್ಮ ಇಟ್ಟಳದಿಂದಾಗಿಯೇ (structure) ಬೇರೆ ಬಗೆಯ ಗುಣಗಳನ್ನು ಹೊಂದಿರುತ್ತವೆ.

ಈ ಹೊಂದಿಸಿದ-ಸರಕುಗಳು ಬೇರೆ ಸರಕುಗಳ ಹಾಗಲ್ಲ ಇವು ಬೆಳಕನ್ನು ಬೇರೆ ಕಡೆಗೆ ಇಲ್ಲವೇ ತಪ್ಪು-ದಾರಿ ಕಡೆಗೆ ಬಾಗಿಸುತ್ತವೆ ಮತ್ತು ಇವುಗಳನ್ನು ಎಳೆದರೆ ಇವು ಬೆಳಕನ್ನು ಕುಗ್ಗಿಸುತ್ತವೆ.

ಇಂತ ಪರಿಚೆಗಳನ್ನು ಹೊಂದಿರುವುದರಿಂದ ಈ ಹೊಸ ಚೂಟಿಯು ನೇಸರ-ಪಟ್ಟಿಯ ಹಾಗೆ ಕೆಲಸ ಮಾಡುತ್ತದೆ. ಸುತ್ತಮುತ್ತಲಿರುವ ಉಪಯೋಗವಿಲ್ಲದ ಸೀರಲೆಗಳನ್ನು ಹಿಡಿದು ಅವುಗಳಿಂದ 7.3 ಒತ್ತಾಟದವರೆಗೂ (voltage) ಮಿಂಚು ಉಂಟುಮಾಡಬಲ್ಲದು. ಹೀಗೆ ಕಳೆದುಹೋಗುವ ಇಲ್ಲವೇ ಅಡ್ಡಾದಿಡ್ಡಿಯ ಸೀರಲೆಗಳನ್ನು ಹಿಡಿಯುತ್ತಾ, ಕಸುವು ಕಳುವಾಗದ ಹಾಗೆ ನೋಡಿಕೊಳ್ಳುತ್ತವೆ, ಈ ಹೊಸ ಚೂಟಿಗಳು.

ಇದನ್ನು ಹಲವು ಬಗೆಯ ಸಲದೆಣಿಕೆಗಳಿಗೆ (frequencies) ಹಾಗೂ ಹಲವು ಬಗೆಯ ಕಸುವುಗಳಿಗೂ ಬಳಕೆ ಮಾಡಬಹುದೆಂದು ಡ್ಯೂಕ್ ಕಲಿಕೆವೀಡಿನ ಅಲೆಗ್ಸಾಂಡರ್ ಕಟ್ಕೊ (Alexander Katko) ಹೇಳಿದ್ದಾರೆ. ಈ ಬೆಳವಣಿಗೆಯು ಹೊಮ್ಮಿಸಿದ-ಸರಕುಗಳಲ್ಲಿ ಒಂದು ಹೊಸ ಅಲೆಯೊಂದನ್ನು ಎಬ್ಬಿಸಿದೆ.

(ಒಸಗೆಯ ಹಾಗೂ ತಿಟ್ಟದ ಸೆಲೆ: popsci)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: