ಕರುನಾಡ ನದಿಗಳು

ಪ್ರೇಮ ಯಶವಂತ.

ತಿಟ್ಟ

’ಹೊಳೆ ನೀರಿಗೆ ದೊಣ್ಣೆ ನಾಯಕನ ಅಪ್ಪಣೆಯೇಕೆ?’ ಎಂಬಂತೆ ಹರಿಯುತ್ತಿವೆ ನಮ್ಮ ಕರುನಾಡಿನ ನದಿಗಳು. ನಮ್ಮ ದಿನನಿತ್ಯದ ಬದುಕಿನಲ್ಲಿ ನೀರು ಬಹಳ ಮುಕ್ಯ ಪಾತ್ರ ವಹಿಸುತ್ತದೆ. ನೀರಿಲ್ಲದ ಜೀವನವನ್ನು ನೆನಿಸಿಕೊಳ್ಳಲೂ ಸಾದ್ಯವಾಗುವುದಿಲ್ಲ. ನೀರಿಗೆ ಮುಕ್ಯ ಆದಾರವೆ ನದಿಗಳು. ಸಾಕಶ್ಟು ಅನುಕೂಲತೆಗಳನ್ನು ಒದಗಿಸಿಕೊಡುವ ಈ ನದಿಗಳ ಹೆಸರುಗಳೇನು? ಅವುಗಳು ಹೇಗೆ ಹರಿಯುತ್ತವೆ? ಇಂತಹ ಒಂದಶ್ಟು ಕೇಳ್ವಿಗಳಿಗೆ ಉತ್ತರವನ್ನು ತಕ್ಕ ಮಟ್ಟಿಗೆ ತಿಳಿಸಿಕೊಡುವ ನಿಟ್ಟಿನಲ್ಲಿ ” ಕರುನಾಡ ನದಿಗಳು” ಎಂಬ ಸರಣಿ ಬರಹವನ್ನು ಕರ‍್ನಾಟಕದ ನದಿ ಏರ‍್ಪಾಟಿನ ಒಟ್ಟುನೋಟದೊಂದಿಗೆ ಮೊದಲುಮಾಡುತ್ತಿದ್ದೇನೆ.

ಏನಿದು ನದಿ ಏರ‍್ಪಾಟು?

ಒಟ್ಟಾಗಿ ಹರಿಯುವ ನೀರಿನ ಒಂದು ಸಮೂಹವೆ ನದಿ. ತಿಟ್ಟ 1 ರಲ್ಲಿ ತೋರಿಸಿದಂತೆ ಸಾಮಾನ್ಯವಾಗಿ ನದಿಗಳ ಮೂಲ ಬೆಟ್ಟಗಳೇ ಆದರೂ, ಅಶ್ಟು ನೀರು ನದಿಯಾಗಿ ಹರಿಯಲು ಕಾರಣ ಹಿಮ ಕರುಗುವಿಕೆ, ನೆಲದಡಿಯ ನೀರು ಇಲ್ಲವೇ ಮಳೆ ನೀರಿರಬಹುದು. ಮೊದಲಿನಿಂದಲೂ ನದಿಗಳು ಮಂದಿಯ ನಾಗರೀಕತೆಗಳಿಗೆ ಬಹು ಮುಕ್ಯವಾಗಿವೆ. ಮಣ್ಣಿನ ಸವೆತದಿಂದಾಗಿ ಮುಡುಕು ಮೂಡಿಸುತ್ತ ಹರಿವ ದೊಡ್ದ ನದಿಗಳನ್ನು ಅಲ್ಲಲ್ಲಿ ಸಣ್ಣ ನದಿಗಳು ಸೇರುತ್ತವೆ. ಇಂತಹ ನದಿಗಳನ್ನು ಉಪನದಿ ಎನ್ನುತ್ತಾರೆ. ಸಣ್ಣ ನದಿ ಮತ್ತು ದೊಡ್ಡ ನದಿಗಳು ಕೂಡುವ ತಾಣಕ್ಕೆ ಕೂಡಲು ಎನ್ನಬಹುದು. ಹೀಗೆ ಹರಿವ ನದಿಯು ನದೀಮುಕವನ್ನು (ಸಾಗರ, ಕೆರೆ,ಕಟ್ಟೆ) ಸೇರುತ್ತದೆ ಹಾಗು ಸಣ್ಣ ಕಾಲುವೆಗಳಾಗುತ್ತವೆ.

ತಿಟ್ಟ1

ಕರ‍್ನಾಟಕದಲ್ಲಿ ಒಟ್ಟು ಏಳು ಬಗೆಯ ನದಿ ಏರ‍್ಪಾಟುಗಳಿವೆ. ಅವುಗಳ ಹೆಸರು ಮತ್ತು ನಾಲೆಯ ಹರವನ್ನು ಕೆಳಗಿನ ಪಟ್ಟಿಯಲ್ಲಿ ತಿಳಿಯೋಣ.

ಹೊಳೆಗಳು
ನಾಲೆಯ ಹರವು
1000 ಚದರ ಕಿ.ಮೀ(sq.km)
ನೂರಕ್ಕೆ ಬೆಲೆ (%)
1 ಗೋದಾವರಿ 4.41 2.31
2 ಕ್ರಿಶ್ಣ 113.29 59.48
3 ಕಾವೇರಿ 34.27 17.99
4 ಬಡಗಣ ಪೆನ್ನಾರ್ 6.94 3.64
5 ತೆಂಕಣ ಪೆನ್ನಾರ್ 4.37 2.29
6 ಪಲಾರ್ 2.97 1.56
7 ಪಡುವಣಕ್ಕೆ ಹರಿಯುವ ಹೊಳೆಗಳು 24.25 12.73
ಒಟ್ಟು 190.5 100

ಕ್ರಿಶ್ಣ ನದಿ ಏರ‍್ಪಾಟು :

ಮಹಾರಾಶ್ಟ್ರದ ಮಹಾಬಲೇಶ್ವರದಲ್ಲಿ 1337 ಮೀ. ಎತ್ತರದ ಪಡುವಣ ಗಟ್ಟದಲ್ಲಿ ಹುಟ್ಟುವ ಈ ನದಿಯ ತೂರುನೆಲ (peninsula) ಬಾರತದ ಎರಡನೆ ದೊಡ್ಡ ನದಿಯಾಗಿದೆ. ಪಡುವಣ(west)ದಿಂದ ತೆಂಕಣ(south)ಕ್ಕೆ ಹರಿಯುವ ಕ್ರಿಶ್ಣ ನದಿಯು 1400 ಕಿ. ಮೀ ನೇರುದ್ದ (length) ಮಹಾರಾಶ್ಟ್ರ, ಕರ‍್ನಾಟಕ, ಆಂದ್ರಪ್ರದೇಶವನ್ನು ಹಾದು ಹೊಗುತ್ತದೆ. ಬೇರೆ ರಾಜ್ಯಗಳು ಕೂಡಿ ಈ ನದಿಯ ಒಟ್ಟು ಆಯಕಟ್ಟು ( catchment area) 2,58,948 ಚದರ ಕಿ. ಮೀ.

ಬೋಗುಣಿ (basin)ಇರುವ ರಾಜ್ಯ
ಆಯಕಟ್ಟು (catchment area )  ಚದರ ಕಿ. ಮೀ
1 ಮಹಾರಾಶ್ಟ್ರ 69,425
2 ಕರ್ನಾಟಕ 113,271
3 ಆಂದ್ರಪ್ರದೇಶ 76,252
ಒಟ್ಟು 2,58,948

ಕರ‍್ನಾಟಕದಲ್ಲಿ ಕ್ರಿಶ್ಣ ನದಿಯ ಬಹು ಮುಕ್ಯ ಸೀಳುನದಿಗಳೆಂದರೆ ಗಟಪ್ರಬ, ಮಲಪ್ರಬ, ಬೀಮಾ ಮತ್ತು ತುಂಗಬದ್ರಾ. ಇವುಗಳಲ್ಲಿ ಮಲಪ್ರಬ ನದಿಯು ಮಾತ್ರ ಮಹಾರಾಶ್ಟ್ರ ಮತ್ತು ಕರ‍್ನಾಟಕ ಎರಡು ರಾಜ್ಯಗಳಲ್ಲೂ ತನ್ನ ಆಯಕಟ್ಟನ್ನು ಹೊಂದಿದೆ. ಸೀಳುನದಿಗಳ ಒಂದು ಇಣುಕುನೋಟ ಕೆಳಗಿನ ಪಟ್ಟಿಯಲ್ಲಿದೆ.

ಉಪನದಿಗಳು 
ಆಯಕಟ್ಟು (catchment area) ಚದರ ಕಿ.ಮೀ.
ಮೂಲ, ಮೂಲದ ಎತ್ತರ ಮತ್ತು ನದಿಯ ಉದ್ದ
ಒಳ –ಉಪನದಿಗಳು (sub-tributary)
ರಾಜ್ಯ
1 ಗಟಪ್ರಬ 8829 ಪಡುವಣ ಗಟ್ಟ, 884 ಮೀ, 283 ಕಿ.ಮೀ ಹಿರಣ್ಯಕೇಶಿ, ಮಾರ‍್ಕಂಡೇಯ ಮಹಾರಾಶ್ಟ್ರ, ಕರ‍್ನಾಟಕ
2 ಮಲಪ್ರಬ 11549 ಪಡುವಣ ಗಟ್ಟ 792.48 ಮೀ, 306 ಕಿ.ಮೀ ಬೆಣ್ಣಿಹಳ್ಳ, ಹಿರೇಹಳ್ಳ , ಟಸ್ ನದಿ ಕರ‍್ನಾಟಕ
3 ಬೀಮಾ 70,614 ಪಡುವಣ ಗಟ್ಟ 945 ಮೀ, 861 ಕಿ.ಮೀ ಮೂಲ, ಮುತ ಗೊಡ್, ನಿರ, ಸಿನ  ನದಿಗಳ ಕೂಡುಹೊಳೆ ನೀರು ಮಹಾರಾಶ್ಟ್ರ ಕರ‍್ನಾಟಕ
4 ತಂಗಬದ್ರಾ 47,866 ಗಂಗಮೂಲದ ತುಂಗ & ಬದ್ರ, ವರದ, ಹಗರಿ (ವೇದಾವತಿ)  ನದಿಗಳ ಕೂಡುಹೊಳೆ ನೀರು ಕರ‍್ನಾಟಕ &  ಆಂದ್ರಪ್ರದೇಶ
ಪಡುವಣ ಗಟ್ಟ, 1198 ಮೀ, 531 ಕಿ.ಮೀ

ಕಾವೇರಿ ನದಿ ಏರ‍್ಪಾಟು:
ಕಾವೇರಿ ನದಿಯು ತೆಂಕಣ ಬಾರತದ ಅಂತರಾಜ್ಯಗಳ ನದಿಯಾಗಿದೆ. ಮುನ್ನೀರು ಬಾರತದ ಮೂಡಣ(east)ದ ಕಡೆಗೆ ಹರಿಯುವ ಈ ನದಿಯು ಬಂಗಾಳ ಕೊಲ್ಲಿ (ಕಡಲನ್ನು) ಸೇರುತ್ತದೆ. ಕೊಡಗಿನ ಕಾವೇರಿ ಎಂದೇ ಹೆಸರಾಗಿರುವ ಈ ನದಿಯು ಕೊಡಗಿನ ಬ್ರಮ್ಹಗಿರಿ ಬೆಟ್ಟದ ತಲಕಾವೇರಿಯಲ್ಲಿ ಸುಮಾರು 1341 ಮೀ. ಕಡಲ ಮಟ್ಟದಲ್ಲಿ ಹುಟ್ಟುತ್ತದೆ. ಕಾವೇರಿ ನದಿಯ ಒಟ್ಟು ಆಯಕಟ್ಟು 81,155 ಚದರ ಕಿ. ಮೀ. ಕಾವೇರಿ ನದಿ ಏರ‍್ಪಾಟಿನ ಇತರ ರಾಜ್ಯಗಳಲ್ಲಿ ಹರಡಿರುವ ಜಲಾನಯನ ಪ್ರದೇಶ ಮತ್ತು ಅದರ ಕಾಲುವೆ ವ್ಯವಸ್ತೆಯನ್ನು ಕೆಳಗಿನ ಪಟ್ಟಿಯಲ್ಲಿ ಕಾಣಬಹುದು.

ಬೋಗುಣಿ (basin)ಇರುವ ರಾಜ್ಯ
ಆಯಕಟ್ಟು (catchment area )  ಚದರ ಕಿ. ಮೀ
1 ಕರ್ನಾಟಕ 34,273
2 ಕೇರಳ 2,866
3 ತಮಿಳು ನಾಡು 43,868
4 ಪಾಂಡಿಚರಿಯ ಕರಾಯ್ಕಲ್ 148
ಒಟ್ಟು 81,155

ಹಾರಂಗಿ, ಲಕ್ಶ್ಮಣ ತೀರ‍್ತ, ಕಬಿನಿ, ಶಿಮ್ಶ, ಅರ‍್ಕಾವತಿ ಮತ್ತು ಸುವರ‍್ಣವತಿ ಇವೆಲ್ಲ   ಕಾವೇರಿ ನದಿಯ  ಬಹು ಮುಕ್ಯವಾದ ಉಪನದಿಗಳು. ಇವುಗಳಲ್ಲಿ ಕಬನಿ, ಅರ‍್ಕಾವತಿ, ಸುವರ‍್ಣವತಿ ನದಿಗಳು ಹೊರತಾಗಿ ಮಿಕ್ಕೆಲ್ಲ ನದಿಗಳು ನಮ್ಮ ಕರ‍್ನಾಟಕದಲ್ಲೆ ಹುಟ್ಟಿ, ಕರ‍್ನಾಟಕದಲ್ಲೆ ಹರಿಯುತ್ತವೆ. ಈ ನದಿಗಳ ಅಡಕವನ್ನು ಕೆಳಗಿನ  ಪಟ್ಟಿಯಲ್ಲಿ  ಕಾಣಬಹುದು.

ಉಪನದಿಗಳು
(tributary)
ಆಯಕಟ್ಟು
(catchment area) ಚದರ ಕಿ.ಮೀ..
ಮೂಲ, ಮೂಲದ ಎತ್ತರ ಮತ್ತು ನದಿಯ ಉದ್ದ
ಒಳ –ಉಪನದಿಗಳು
(sub-tributary)
ರಾಜ್ಯ
1 ಹಾರಂಗಿ 717 ಪಡುವಣ ಗಟ್ಟದ ಪುಶ್ಪಗಿರಿ ಬೆಟ್ಟ, 1067 ಮೀ,, 50  ಕಿ. ಮೀ . ಕರ‍್ನಾಟಕ
2 ಹೇಮಾವತಿ 5410 ಪಡುವಣ ಗಟ್ಟದ ಬಳ್ಳರಾಯನ ದುರ‍್ಗ, 1219  ಮೀ,, 245 ಕಿ. ಮೀ ಕರ‍್ನಾಟಕ
3 ಕಬಿನಿ 7040 ಕೇರಳದ ಪಡುವಣ ಗಟ್ಟ, 2,140 ಮೀ, 230  ಕಿ. ಮೀ. ತರಕ, ಹೆಬ್ಬಳ್ಳ , ನುಗು, ಗುಂಡಲ್ ಕರ‍್ನಾಟಕ, ಕೇರಳ ಮತ್ತು ತಮಿಳು ನಾಡು
4 ಸುವರ‍್ಣಾವತಿ 1787 ನಸ್ರೂರ್ ಗಟ್ಟದ ಸಾಲು, ನದಿಯ ಉದ್ದ: 88  ಕಿ. ಮೀ. ಕರ‍್ನಾಟಕ ಮತ್ತು ತಮಿಳು ನಾಡು
5 ಲಕ್ಶ್ಮಣತೀರ‍್ತ 1690 ಪಡುವಣ ಗಟ್ಟ,1,950 ಮೀ, 131  ಕಿ. ಮೀ. ರಾಮತೀರ‍್ತ ಕರ‍್ನಾಟಕ
6 ಶಿಂಶಾ 8469 ತುಮುಕೂರು ಜಿಲ್ಲೆ, 914 ಮೀ,221  ಕಿ. ಮೀ. ವೀರವಯ್ ಶ್ನವಿ, ಕಣಿಹಳ್ಳ, ಚಿಕ್ಕೊಳೆ, ಹೆಬ್ಬಹಳ್ಳ,ಮುಲ್ಲಹಳ್ಳ ಮತ್ತು ಕಣ್ವ ಕರ‍್ನಾಟಕ
7 ಅರ‍್ಕಾವತಿ 4351 ನಂದಿದುರ‍್ಗ,1,480  ಮೀ, 161  ಕಿ. ಮೀ ಕುಮುದಾವತಿ , ಮಣಿಹಳ್ಳ,ಕುಟ್ಟೆಹೊಳೆ, ವ್ರುಶಬಾವತಿ ಕರ‍್ನಾಟಕ ಮತ್ತು ತಮಿಳು ನಾಡು

ಕೆಳಗಿನ ತಿಟ್ಟದಲ್ಲಿ ನದಿಗಳ ಹರಿವು, ನಾಡು ಮತ್ತು ಬೋಗುಣಿಗಳ ಎಲ್ಲೆಯನ್ನು ತೋರಿಸಲಾಗಿದೆ.

ತಿಟ್ಟ2

“ಕರುನಾಡ ನದಿಗಳು” ಎಂಬ ಈ ಸರಣಿಯ ಮುಂದಿನ ಬರಹದಲ್ಲಿ ಇನ್ನಶ್ಟು ನದಿಗಳ ಬಗ್ಗೆ ತಿಳಿದುಕೊಳ್ಳೋಣ

(ಮಾಹಿತಿ ಸೆಲೆ: waterresources.kar.nic.in)
(ತಿಟ್ಟ ಸೆಲೆ: sageography.myschoolstuff.co.za)

 

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 25/07/2014

    […] ನದಿಗಳು ಎಂಬ ನನ್ನ ಸರಣಿ ಬರಹದ ಒಂದನೇ ಬಾಗದಲ್ಲಿ ನದಿ ಏರ‍್ಪಾಟು ಎಂದರೇನು ಎಂಬುದರ […]

ಅನಿಸಿಕೆ ಬರೆಯಿರಿ:

%d bloggers like this: