ಕರುನಾಡ ನದಿಗಳು: ಬಾಗ-2

ಪ್ರೇಮ ಯಶವಂತ.

Titta 1

ಕರುನಾಡ ನದಿಗಳು ಎಂಬ ನನ್ನ ಸರಣಿ ಬರಹದ ಒಂದನೇ ಬಾಗದಲ್ಲಿ ನದಿ ಏರ‍್ಪಾಟು ಎಂದರೇನು ಎಂಬುದರ ಬಗ್ಗೆ ಹಾಗು ಕರ‍್ನಾಟಕದ ಒಂದಶ್ಟು ನದಿಗಳ ಏರ‍್ಪಾಟಿನ ಬಗ್ಗೆ ತಿಳಿದುಕೊಂಡಿದ್ದೆವು. ಉಳಿದದ್ದನ್ನು ಈ ಬಾಗದಲ್ಲಿ ತಿಳಿಯೋಣ ಬನ್ನಿ.

Titta 2

ಗೋದಾವರಿ ನದಿ ಏರ‍್ಪಾಟು:
ಅರಬ್ಬಿ ಕಡಲ ತೀರದಿಂದ ಸುಮಾರು 80 ಕಿ.ಮೀ. ದೂರದಲ್ಲಿ ಮಹರಾಶ್ಟ್ರದ ನಾಸಿಕ್ ನಲ್ಲಿ ಗೋದಾವರಿ ನದಿಯು ಹುಟ್ಟುತ್ತದೆ. 1067 ಮೀ ಎತ್ತರದಲ್ಲಿ ಹುಟ್ಟುವ ಈ ನದಿಯು ತೆಂಕಣದಲ್ಲಿ 1465 ಕಿ.ಮೀ.ನಶ್ಟು ಮೂಡಣ ದಿಕ್ಕಿಗೆ ಹರಿದು ಮಹರಾಶ್ಟ್ರ, ಆಂದ್ರಪ್ರದೇಶದ ಮೂಲಕ ರಾಜಮುಂಡ್ರಿಯ ಮೇಲೆ ಬಂಗಾಳ ಕೊಲ್ಲಿ (ಕಡಲನ್ನು) ಸೇರುತ್ತದೆ. ಗೋದಾವರಿಯ ಆಯಕಟ್ಟು ಸುಮಾರು 3,12,813 ಚದರ ಕಿ ಮೀ ನಶ್ಟಿದೆ. ಇದರ ವಿವರವನ್ನು ಕೆಳಗಿನ ಪಟ್ಟಿಯಲ್ಲಿ ಕಾಣಬಹುದು.

ಅಂಕಿ ಬೋಗುಣಿ (basin) ಇರುವ ರಾಜ್ಯ  ಆಯಕಟ್ಟು(catchment area) ಚದರ ಕಿ .ಮೀ
1 ಮಹರಾಶ್ಟ್ರ 1,52,199
2 ಮದ್ಯಪ್ರದೇಶ 26,168
3 ಚತ್ತಿಸ್ ಗಡ್ 39,087
4 ಕರ್ನಾಟಕ 4,406
5 ಆಂದ್ರಪ್ರದೇಶ 73,201
6 ಒರಿಸ್ಸ 17,752
ಒಟ್ಟು 3,12,813

ಗೋದಾವರಿ ನದಿಯ ಬಹು ಮುಕ್ಯ ಸೀಳುನದಿಗಳೆಂದರೆ ಪ್ರವರ, ಪೂರ‍್ಣ, ಮಾಂಜ್ರ, ಪ್ರಣಹಿತ, ಇಂದ್ರಾವತಿ ಮತ್ತು ಸಬರಿ. ಕರ‍್ನಾಟಕದಲ್ಲಿ ತನ್ನ ಆಯಕಟ್ಟನ್ನು ಹೊಂದಿರುವ ಮಾಂಜ್ರ ನದಿಯ ವಿವರ ಕೆಳಗಿನ ಪಟ್ಟಿಯಲ್ಲಿ ತಿಳಿಸಲಾಗಿದೆ.

ಉಪನದಿ ಆಯಕಟ್ಟು(catchment area) ಚದರ ಕಿ ಮೀ ಮೂಲ, ಮೂಲದ ಎತ್ತರ(Origin , Altitude) ಒಳ-ಉಪನದಿ ರಾಜ್ಯ
ಮಾಂಜ್ರ 15,667 ಚದರ ಕಿ ಮೀ ಮಹರಾಶ್ಟ್ರ,       4,406 ಚದರ ಕಿ ಮೀ -ಕರ‍್ನಾಟಕ,   10,772 ಚದರ ಕಿ ಮೀ -ಆಂದ್ರಪ್ರದೇಶ ಬಾಲ ಗಾಟ್ ಬೆಟ್ಟಗಳ ಸಾಲು, 823 ಮೀ ತಿರಿನ, ಕರಂಜ, ಹಲ್ ದಿ,  ಲೆಂಡಿ ಮತ್ತು ಮನ್ನಾರ್ ಮಹರಾಶ್ಟ್ರ, ಕರ‍್ನಾಟಕ ಮತ್ತು ಆಂದ್ರಪ್ರದೇಶ

ಪಡುವಣಕ್ಕೆ ಹರಿವ ನದಿಗಳ ಏರ‍್ಪಾಟು:
ಅರಬ್ಬಿ ಕಡಲತ್ತ ತೆಂಕಣದಲ್ಲಿ, ಪಡುವಣ ದಿಕ್ಕಿಗೆ ಬರುವ ಮುಂಗಾರಿಗೆ ಪಡುವಣ ಗಟ್ಟಗಳು ಒಂದು ರೀತಿಯ ಅಡ್ಡಗೋಡೆಯಾಗಿ, ಪಡುವಣದಲ್ಲಿ ಅತಿ ಹೆಚ್ಚು ಮಳೆಗೆ ಕಾರಣವಾಗಿವೆ ಹಾಗು ಜೂನ್ ನಿಂದ ಸೆಪ್ಟೆಂಬರ‍್ ವರೆಗಿನ ಮಳೆಗಾಲದಲ್ಲಿ ನೂರಕ್ಕೆ ತೊಂಬತ್ತರಶ್ಟು ಮಳೆಯನ್ನು ತನ್ನದಾಗಿಸಿಕೊಳ್ಳುತ್ತವೆ.

ಪಡುವಣ ಗಟ್ಟದಲ್ಲಿ ಹುಟ್ಟುವ ನದಿಗಳು ಸುಮಾರು 400 ರ ರಿಂದ 1600 ಮೀ. ಎತ್ತರದಲ್ಲಿ ಪಡುವಣ ಗಟ್ಟಗಳ ತುದಿಗೆ ಹತ್ತಿರವಾಗಿ ಕಡಲ ಮೇಲ್ಮಟ್ಟದಲ್ಲಿ ಹುಟ್ಟುತ್ತವೆ. ಹೀಗೆ ಹುಟ್ಟುವ ನದಿಗಳು ಪಡುವಣ ದಿಕ್ಕಿನಲ್ಲಿ ಹರಿದು ಸುಮಾರು 50 ರಿಂದ 300 ಕಿ.ಮೀ. ದೂರದಲ್ಲಿ ಅರಬ್ಬಿ ಕಡಲನ್ನು ಸೇರುತ್ತವೆ. ನದಿಗಳು ತನ್ನ ಮೆಲ್ಬಾಗದಲ್ಲಿ ಅತಿಹೆಚ್ಚು ಕಡಿದಾಗಿದ್ದು (steep), ನಡುಬಾಗದಲ್ಲಿ ಕಡಿಮೆ ಇರುತ್ತವೆ. ಕೇವಲ ಕಡಲ ಹತ್ತಿರ ಸಮನಾದ ನೆಲವನ್ನು (flat gradient) ಮತ್ತು ಹೊನಲು ಹರಿದ ಸಮತಲ ಬೂಮಿಯನ್ನು (flood plain) ಕಾಣಬಹುದು.

ಪಡುವಣಕ್ಕೆ ಹರಿಯುವ ಇನ್ನಶ್ಟು ನದಿಗಳು, ಉಪನದಿಗಳು ಮತ್ತು ಇವುಗಳು ಹರಿವ ರಾಜ್ಯಗಳನ್ನು ಕೆಳಗಿನ ಪಟ್ಟಿಯಲ್ಲಿ ಕಾಣಬಹುದು.

ಅಂಕಿ ಉಪನದಿಗಳು ಆಯಕಟ್ಟು (catchment area) ಚದರ ಕಿ.ಮೀ. ಮೂಲ, ಮೂಲದ ಎತ್ತರ ಮತ್ತು ನದಿಯ ಉದ್ದ ಒಳ –ಉಪನದಿಗಳು (sub-tributary) ರಾಜ್ಯ
1 ಮಹಾದಾಯಿ/ಮಾಂಡವಿ 2,032 ಮೂಲ:ಪಡುವಣ ಗಟ್ಟದ ಬೆಳಗಾವಿ        ಜಿಲ್ಲೆ
ಮೂಲದ ಎತ್ತರ: 600 ಮೀ.
ನದಿಯ ಉದ್ದ: 87 ಕಿ.ಮೀ..
ಮದೇರಿ ಕರ‍್ನಾಟಕ, ಗೋವ
2 ಕಾಳಿ ನದಿ 4,188 ಮೂಲ:ಪಡುವಣ ಗಟ್ಟದ ಬಿಡಿ ಹಳ್ಳಿ
ಮೂಲದ ಎತ್ತರ: 600 ಮೀ.
ನದಿಯ ಉದ್ದ: 153ಕಿ.ಮೀ.
ಪಂಡರಿ, ತಟ್ಟಿ ಹಳ್ಳ ಮತ್ತು ನಾಗಿ ಕರ‍್ನಾಟಕ
3 ಗಂಗವಲ್ಲಿ (ಬೆಡ್ತಿ) 3,574 ಮೂಲ:ಪಡುವಣ ಗಟ್ಟದ ತೆಂಕಣ ದಾರವಾಡ
ಮೂಲದ ಎತ್ತರ: 700 ಮೀ.
ನದಿಯ ಉದ್ದ:152ಕಿ.ಮೀ.
ಕರ‍್ನಾಟಕ
4 ಅಗನಾಶಿನಿ (ತದ್ರಿ) 1,330 ಮೂಲ:ಸಿರಸಿ ಹತ್ತಿರದ ಪಡುವಣ ಗಟ್ಟಗಳು
ಮೂಲದ ಎತ್ತರ: 500 ಮೀ.
ನದಿಯ ಉದ್ದ: 84 ಕಿ.ಮೀ.
ಕರ‍್ನಾಟಕ
5 ಶರಾವತಿ 3,592 ಮೂಲ:ಶಿವಮೊಗ್ಗ ಜಿಲ್ಲೆಯ ಹುಮಾಚ ಪಡುವಣ ಗಟ್ಟಗಳು
ಮೂಲದ ಎತ್ತರ: 700 ಮೀ.
ನದಿಯ ಉದ್ದ: 122 ಕಿ.ಮೀ.
ಕರ‍್ನಾಟಕ
6 ಚಕ್ರ ನದಿ 336 ಮೂಲ:ಮೂಡಣದ ಕೊಡಚಾದ್ರಿ, ಶಿವಮೊಗ್ಗ ಜಿಲ್ಲೆ
ಮೂಲದ ಎತ್ತರ: 600 ಮೀ.
ನದಿಯ ಉದ್ದ: 52 ಕಿ.ಮೀ.
ಕೊಲ್ಲೂರು ಕರ‍್ನಾಟಕ
7 ವರಾಹಿ (ಹಲದಿ) 759 ಮೂಲ:ಕವಲೆದುರ‍್ಗ, ಶಿವಮೊಗ್ಗ ಜಿಲ್ಲೆ
ಮೂಲದ ಎತ್ತರ: 600 ಮೀ.
ನದಿಯ ಉದ್ದ: 66 ಕಿ.ಮೀ.
ಕರ‍್ನಾಟಕ
8 ನೇತ್ರಾವತಿ 3,222 ಮೂಲ:ತೆಂಕಣ ಕನ್ನಡದ ಬೆಳ್ಳರಾಯನ ದುರ‍್ಗ
ಮೂಲದ ಎತ್ತರ:1000ಮೀ.
ನದಿಯ ಉದ್ದ: 103 ಕಿ.ಮೀ.
ಗುಡಿಹೊಳೆ, ಕುಮಾರದಾರ ಮತ್ತು ಶಿಸಿಯ ಹೊಳೆ ಕರ‍್ನಾಟಕ
9 ಬರಪೊಳೆ (ವಾಲಪಟ್ಟಣ) 1,867 ಮೂಲ:ಕೊಡಗಿನ ಬ್ರಮ್ಹಗಿರಿ ಗಟ್ಟದ ಕಾಡು
ಮೂಲದ ಎತ್ತರ: 900 ಮೀ.
ನದಿಯ ಉದ್ದ: 110 ಕಿ.ಮೀ.
ಕರ‍್ನಾಟಕ ಮತ್ತು ಕೇರಳ

ಬಾಗ -1 ರಲ್ಲಿ ತಿಳಿಸಿರುವ ಬೋಗುಣಿಗಳ (basin) ಜೊತೆ ಇನ್ನೊಂದಶ್ಟು ಸಣ್ಣ ಸಣ್ಣ ಆಯಕಟ್ಟು ಹೊಂದಿರುವ ನದಿಗಳು ಕಡಲಿಗೆ ಹತ್ತಿರವಿದ್ದು, ಕಡಿಮೆ ಎತ್ತರದಿಂದ ಹರಿದು ನೇರವಾಗಿ ಅರಬ್ಬಿ ಕಡಲನ್ನು ಸೇರುತ್ತವೆ.

ಪಡುವಣಕ್ಕೆ ಹರಿವ ನದಿಗಳ ಏರ‍್ಪಾಟಿನಲ್ಲಿ ತನ್ನದೇ ಆದ ಆಯಕಟ್ಟನ್ನು(independent catchment) ಹೊಂದಿರುವ ಇನ್ನಶ್ಟು ನದಿಗಳು ಕೆಳಗಿನಂತಿವೆ.

ಶರಾವತಿ ಮತ್ತು ಚಕ್ರ ನದಿಗಳ ನಡುವಿನ ಆಯಕಟ್ಟು:
ಅರಬ್ಬಿ ಸಮುದ್ರಕ್ಕೆ ಸೇರುವ ಸಣ್ಣ-ಸಣ್ಣ ನದಿಗಳು ಬಹಳ ಇವೆ. ಅವುಗಳಲ್ಲಿ ಕೆಲವು ಕೊಲ್ಲೂರು ನದಿ, ಗಂಟಿಹೊಳೆ, ವೆಂಕಟಪುರ, ಬಯ್ಂದುರ‍್ಹೊಳೆ ಶಂಕರಗುಂಡಿ, ಕುಂಬಾರಹೊಳೆ, ಯೆಡಮಾವಿನಹೊಳೆ. ಈ ನದಿಗಳ ಪೂರ‍್ತಿ ಆಯಕಟ್ಟು ಕರ‍್ನಾಟಕದಲ್ಲಿದೆ.

ವರಾಹಿ ಮತ್ತು ನೆತ್ರಾವತಿ ನದಿಗಳ ನಡುವಿನ ಆಯಕಟ್ಟು :
ಕರ‍್ನಾಟಕದಲ್ಲೆ ಇರುವ ಈ ಆಯಕಟ್ಟಿನಲ್ಲಿ ಸ್ವರ‍್ಣ . ಸೀತಾನದಿ, ಮುಲ್ಕಿ ನದಿ, ಪಾವಂಜೆ ,ನದಿಸಾಲು, ಗುರಪುರ, ಎಣ್ಣೆ ಹೊಳೆ, ಮಡಿಸಲ್ ಹೊಳೆಗಳು ಹರಿಯುತ್ತವೆ.

ನೇತ್ರಾವತಿ ಮತ್ತು ಚಂದ್ರಗಿರಿ (ಪಯಸ್ವಾಣಿ) ನದಿಗಳ ನಡುವಿನ ಆಯಕಟ್ಟು:
ಈ ಆಯಕಟ್ಟಿನಲ್ಲಿ ಮುಕ್ಯವಾಗಿ ಚಂದ್ರಗಿರಿ ಮತ್ತು ಶಿರಿಯ ನದಿಗಳು ಹರಿಯುತ್ತವೆ. ಚಂದ್ರಗಿರಿ ನದಿಯು ಕೊಡಗು ಜಿಲ್ಲೆಯ ಪಡುವಣದ ಮೆರ‍್ಕೆರದಲ್ಲಿ ಸುಮಾರು 600 ಮೀ. ಎತ್ತರದಲ್ಲಿ ಹುಟ್ಟಿದರೆ, ಪಯಸ್ವಾಣಿ ನದಿಯು ಕೊಡಗಿನ ಪಟ್ಟಿ ಗಟ್ಟದ ಕಾಡಿನಲ್ಲಿ ಸುಮಾರು 1350 ಮೀ. ಎತ್ತರದಲ್ಲಿ ಹುಟ್ಟುತ್ತದೆ. ಈ ಎರಡು ನದಿಗಳು ಅರಬ್ಬಿ ಸಮುದ್ರದ ಗತಿಗೆ ವಿರುದ್ದವಾಗಿ 15 ಕಿ.ಮೀ ದೂರದಲ್ಲಿ ಕಾಸರಗೋಡಿನ ಮಚಿಪನದಲ್ಲಿ ಸೇರುತ್ತವೆ. ಇದರ ಒಟ್ಟು ಆಯಕಟ್ಟು 1406 ಚದರ ಕಿ.ಮೀ ಇದೆಯಾದರೂ 836 ಚದರ ಕಿ.ಮೀ ನಮ್ಮ ಕರ‍್ನಾಟಕದಲ್ಲಿದ್ದು ಉಳಿದದ್ದು ಕೇರಳ ರಾಜ್ಯಕ್ಕೆ ಸೇರುತ್ತದೆ.

ಬಡಗಣ ಪೆನ್ನಾರ‍್ ನದಿ ಏರ‍್ಪಾಟು:

ಅಂಕಿ ಉಪನದಿ  ಆಯಕಟ್ಟು (catchment area) ಚದರ ಕಿ.ಮೀ. ಮೂಲ ಮತ್ತು ನದಿಯ ಉದ್ದ ಒಳ –ಉಪನದಿಗಳು (sub-tributary) ರಾಜ್ಯ
1 ಉತ್ತರ ಪಿನಾಕಿನಿ (ಬಡಗಣ ಪೆನ್ನಾರ್ ನದಿ) 6937 ಕೊಲಾರದ ನಂದಿ ಬೆಟ್ಟ. ನದಿಯ ಉದ್ದ:597 ಕಿ.ಮೀ. ಜಯಮಂಗಲಿ, ಕುಮುದಾವತಿ, ಚಿತ್ರಾವತಿ ಮತ್ತು ಪಾಪಗ್ನಿ ಕರ‍್ನಾಟಕ &  ಆಂದ್ರಪ್ರದೇಶ

ತೆಂಕಣ ಪೆನ್ನಾರ‍್ ನದಿ ಏರ‍್ಪಾಟು:

ಅಂಕಿ ಉಪನದಿ  ಆಯಕಟ್ಟು (catchment area) ಚದರ ಕಿ.ಮೀ. ಮೂಲ ಒಳ –ಉಪನದಿಗಳು (sub-tributary) ರಾಜ್ಯ
1 ತೆಂಕಣ ಪೆನ್ನಾರ್ 4370 ಕೊಲಾರದ ನಂದಿ ಬೆಟ್ಟ ಕರ‍್ನಾಟಕ ಮತ್ತು ತಮಿಳು ನಾಡು

ಪಲಾರ‍್ ನದಿ ಏರ‍್ಪಾಟು:

ಅಂಕಿ ಉಪನದಿ  ಆಯಕಟ್ಟು (catchment area) ಚದರ ಕಿ.ಮೀ. ಮೂಲ ಒಳ –ಉಪನದಿಗಳು (sub-tributary) ರಾಜ್ಯ
1 ಪಲಾರ್ 2813 ಕೊಲಾರದ ತಲಗಾವರ ಹಳ್ಳಿ,ಮೂಲದ ಎತ್ತರ:900 ಮೀ ನದಿಯ ಉದ್ದ348ಕಿ.ಮೀ. ಕರ‍್ನಾಟಕ, ಆಂದ್ರಪ್ರದೇಶ ಮತ್ತು ತಮಿಳು ನಾಡು

(ತಿಟ್ಟ ಮತ್ತು ಸುದ್ದಿ ಸೆಲೆ: www.indiamike.com, waterresources.kar.nic.in, www.ksdma.co.in)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 09/08/2015

    […] ನದಿಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ಬರಹವನ್ನು ಓದಿ […]

ಅನಿಸಿಕೆ ಬರೆಯಿರಿ:

Enable Notifications OK No thanks