ನಾಳೆ ಜಿಗಿಯಲಿರುವ ’Zest’

ಜಯತೀರ‍್ತ ನಾಡಗವ್ಡ.

zest full front view

ಹಬ್ಬಗಳು ಬಂದರೆ ಕಾರುಬಂಡಿ ಕಯ್ಗಾರಿಕೆಯವರ ಚಟುವಟಿಕೆಗಳು ಚುರುಕುಗೊಳ್ಳುತ್ತವೆ. ಬಾರತದ ಹಲವು ನಾಡುಗಳಲ್ಲಿ ಹಲ ಬಗೆಯ ಹಬ್ಬಗಳಲ್ಲಿ ಕಾರುಕೊಳ್ಳುಗರ ಸಂಕ್ಯೆ ಹೆಚ್ಚುತ್ತದೆ. ಕೊಳ್ಳುಗರ ನಾಡಿಮಿಡಿತ ಅರಿತ ಕಾರುಕೂಟದವರು ತಮ್ಮ ಹೊಸ ಕಾರುಗಳನ್ನು ಇದೇ ಹೊತ್ತಿನಲ್ಲಿ ಮಾರುಕಟ್ಟೆಗಿಳಿಸಿ ತಮ್ಮ ಲಾಬವನ್ನು ಹೆಚ್ಚಿಸುವ ಹವಣಿಕೆಯಲ್ಲಿರುತ್ತಾರೆ.

ಈ ತಿಂಗಳಿನಿಂದ ಆರಂಬಗೊಂಡಿರುವ ನಾಗರ ಪಂಚಮಿ, ವರಮಹಾಲಕ್ಶ್ಮಿ ಹಬ್ಬಗಳಲ್ಲದೇ ಕೆಲವೇ ದಿನಗಳಲ್ಲಿ ಬರಲಿರುವ ಗವ್ರಿ ಗಣೇಶನ ಹಬ್ಬ ಮತ್ತು ದಸರೆಗಳಿಗೆ ಸಾಲು ಸಾಲು ಕಾರುಗಳು ಮಾರುಕಟ್ಟೆಗೆ ಬರುತ್ತಿವೆ. ಇದಕ್ಕೆ ಸಾಕ್ಶಿಯೆಂಬಂತೆ ಕಳೆದ ತಿಂಗಳಶ್ಟೇ ಹೋಂಡಾದ ಮೊಬಿಲಿಯೊ ಬಿಡುಗಡೆಯಾಗಿತ್ತು. ಇದೀಗ ಬಾರತದ ಪ್ರಮುಕ ಮತ್ತು ಹೆಸರುವಾಸಿ ಕೂಟ ಟಾಟಾದವರ ಸರದಿ.

ಸುಮಾರು ಒಂದು ವರುಶದಿಂದ ಇಳಿಮುಕ ಕಂಡಿದ್ದ ವಿವಿದ ಕೂಟಗಳ ಕಾರು ಮಾರಾಟ, ಇದೀಗ ಆಮೆಗತಿಯಲ್ಲಿ ಸುದಾರಣೆಗೊಳ್ಳುತ್ತಿದೆ. ಕಳೆದೆರಡು ತಿಂಗಳಲ್ಲಿನ ಮಾರಾಟದ ಅಂಕಿ-ಸಂಕ್ಯೆಗಳು ತುಸು ನೆಮ್ಮದಿ ತಂದಿವೆ. ಟಾಟಾ ಕೂಟದವರು ಪರಿಸ್ತಿತಿಯೂ ಇದಕ್ಕೆ ಹೊರತಾಗಿಲ್ಲ. ಒಂದರ ಮೇಲೊಂದು ಸೋತ ಹಮ್ಮುಗೆಗಳು ಮತ್ತು ಕೂಟದ ಹಿರಿಯ ಕೆಲಸಗಾರರು ಕೂಟ ತೊರೆದು ಹೋಗಿದ್ದ ಕಹಿ ನೆನಪುಗಳ ನಡುವೆಯೇ ಹೊಸದೊಂದು ಕಾರನ್ನು ಅಣಿಗೊಳಿಸಿ ಮಾರುಕಟ್ಟೆಯ ಪಯ್ಪೋಟಿಗೆ ತೊಡೆತಟ್ಟಿದೆ. ಇದೇ ಮಂಗಳವಾರ ಆಗಸ್ಟ್ 12 ಅಂದರೆ ನಾಳೆ ಜೆಸ್ಟ್ (Zest) ಹೆಸರಿನ ಕಿರು ಸೇಡಾನ್ ಕಾರನ್ನು ಜನರ ಮುಂದಿಡುತ್ತಿದೆ.

zest cars together

ಕಿರುಸೇಡಾನ್ ಕಾರುಗಳು ಇಂದಿನ ದಿನಗಳಲ್ಲಿ ಬಲು ಮೆಚ್ಚುಗೆಯಾದ ಕಾರುಗಳೆನಿಸಿವೆ. 4-5 ಜನರಿರುವ ಪುಟಾಣಿ ಕುಟುಂಬಗಳಿಗೆ ಕಿರುಸೇಡಾನ್ ಕಾರುಗಳು ಹೇಳಿಮಾಡಿಸಿದಂತಿವೆ. ಮಾರುಕಟ್ಟೆಯ ಒಡೆಯನೆಂದೇ ಹೆಸರು ಮಾಡಿರುವ ಮಾರುತಿ ಸುಜುಕಿಯವರ ಸ್ವಿಪ್ಟ್ ಡಿಜಾಯರ್‍, ಬಾರತದಲ್ಲಿ ಹೋಂಡಾದ ಮೊದಲ ಡಿಸೇಲ್ ಬಿಣಿಗೆಯ ಬಲದಿಂದ ಸೋಲಿಲ್ಲದ ಸರದಾರನಂತೆ ಮುನ್ನಡೆ ಪಡೆದಿರುವ ‘ಅಮೇಜ್’, ಮೊದಲಿನಿಂದಲೂ ಕೊಳ್ಳುಗರ ನೆಚ್ಚಿನ ಹಾಗೂ ಹೊಸದಾಗಿಸಿದ ಹ್ಯುಂಡಾಯ್ ‘ಆಕ್ಸೆಂಟ್’ ಗಳ ಸಾಲಿಗೆ ಟಾಟಾದವರ ‘ಜೆಸ್ಟ್’ ಸೇರಿಕೊಳ್ಳಲಿದೆ.

ಕಿರುಸೇಡಾನ್ ಕಾರುಗಳ ಮಾರುಕಟ್ಟೆಗೆ ಜೆಸ್ಟ್ ಬರುವಿಕೆಯಿಂದ ಕಳೆಕಟ್ಟಲಿದ್ದು, ಕೊಳ್ಳುಗರಿಗೆ ಆಯ್ಕೆಗಳು ಕೂಡ ಹೆಚ್ಚಲಿವೆ. ಇದೇ ವರುಶ ನಡೆದ ತಾನೋಡಗಳ ತೋರ‍್ಪಿನಲ್ಲಿ (auto show) ಜೆಸ್ಟ್ ಕಾರಿನ ಮಾದರಿ ಕಾಣಿಸಿಕೊಂಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Table2

(ಜೆಸ್ಟ್ ಕಾರುಗಳ ಜತೆ ಇತರ ಕಾರುಗಳ ಹೋಲಿಕೆ)

ಕಳೆದ ನಾಲ್ಕುವರುಶಗಳಿಂದ ಜೆಸ್ಟ್ ಕಾರಿನ ಹಮ್ಮುಗೆ ನಡೆಯುತ್ತಿತ್ತೆಂದು ಟಾಟಾ ಹೇಳಿಕೊಂಡಿದೆ. ಅದು ಅಲ್ಲದೇ ಬ್ರಿಟನ್ ಮತ್ತು ಇಟಲಿಯಲ್ಲಿರುವ ಟಾಟಾದ ಅರಕೆಮನೆಯ (Tata Motors European Technical Centre) ಹಲವು ಹಿರಿಯ ಬಿಣಿಗೆಯರಿಗರು ಜೆಸ್ಟ್ ಕಾರ್ ತಯಾರಿಸುವಲ್ಲಿ ಬಾರತದ ಬಿಣಿಗೆಯರಿಗರೊಂದಿಗೆ ಒಟ್ಟಾಗಿ ಕೆಲಸ ಮಾಡಿದ್ದಾರೆ. ಮಿಂಬಲೆಗಳ ಮೂಲಕ ಕಾರನ್ನು ಮುಂಗಡ ಕಾಯ್ದಿರಿಸುವಿಕೆ ಕೂಡ ಆರಂಬಿಸಲಾಗಿದೆ. ಹೋಂಡಾ ಕೂಟ ಮೊಬಿಲಿಯೊ ಮಾರಾಟಕ್ಕೆ ಹಾಕಿಕೊಂಡಿದ್ದ ಮಂತ್ರವನ್ನೇ ಟಾಟಾ ನೆಚ್ಚಿಕೊಂಡಂತಿದೆ. ಬರೀ 21000 ರೂಪಾಯಿಗಳಲ್ಲಿ ಜೆಸ್ಟ್ ಕಾರಿನ ಮುಂಗಡ ಕಾಯ್ದಿರಿಸಬಹುದಾಗಿದೆ.

ವಿಶೇಶಗಳು
interirosಜೆಸ್ಟ್ ಪೆಟ್ರೋಲ್ ಮತ್ತು ಡಿಸೇಲ್ ಎರಡು ಮಾದರಿಗಳಲ್ಲಿ ಸಿಗಲಿದೆ. ಪೆಟ್ರ‍ೋಲ್ ಮಾದರಿಗಳಿಗೆ ಹೊಚ್ಚ ಹೊಸದಾಗಿ
ಬೆಳೆಸಿರುವ 1.2 ಲೀಟರ್‍ ಅಳತೆಯ ರೆವೊಟ್ರಾನ್(Revotron) ಬಿಣಿಗೆ ಬಲತುಂಬಿದರೆ, ಡಿಸೇಲ್ ಮಾದರಿಗಳಿಗೆ ಪಿಯಟ್ ಕೂಟದ ಹೆಸರುವಾಸಿ 1.3 ಲೀಟರ್‍ ಅಳತೆಯ ಕ್ವಾಡ್ರಾಜೆಟ್(Quadra jet) ಬಿಣಿಗೆಯನ್ನು ಜೋಡಿಸಲಾಗಿದೆ. ಪೆಟ್ರೋಲ್ ರೆವೊಟ್ರಾನ್ ಬಿಣಿಗೆಯನ್ನು ವಿಶೇಶವಾಗಿ ಅರಕೆ ಮಾಡಿ ತಯಾರಿಸಲಾಗಿದ್ದು ಇದರಲ್ಲಿ 3 ಬಿಣಿಗೆಯ ಕಸುವು ಇರಲಿದೆಯಂತೆ.

ಟಾಟಾನವರ ಬಯಲರಿಕೆಗಳಲ್ಲೂ ಈ ವಿಶೇಶತೆಯ ಬಗ್ಗೆ ಹೆಚ್ಚು ಒತ್ತುಕೊಡಲಾಗಿದೆ. ಡಿಜಾಯ್ನ್ ನೆಕ್ಸ್ಟ್(DesigNext), ಡ್ರಾಯ್ವ್ ನೆಕ್ಸ್ಟ್(DriveNext) ಮತ್ತು ಕನೆಕ್ಟ್ ನೆಕ್ಸ್ಟ್(ConnectNext) ಎಂಬ ಮೂರು ಸೂತ್ರಗಳನ್ನು ಸೇರಿಸಿ ಟಾಟಾದವರ ಹೊಸ ಗುರಿ ಹಾರಿಜೋನ್ ನೆಕ್ಸ್ಟ್(HorizoNext) ಗೆ ಸರಿಹೊಂದುವಂತೆ ಕಾರನ್ನು ತಯಾರಿಸಲಾಗಿದೆಯಂತೆ ಟಾಟಾ ಕಾರು ವಿಬಾಗದ ಮೇಲಾಳು ರಂಜಿತ್ ಯಾದವ್ ತಿಳಿಸಿದ್ದಾರೆ.

table1

ಜೆಸ್ಟ್ ಕಾರಿನ ಪೆಟ್ರೋಲ್ ಮತ್ತು ಡಿಸೇಲ್ ನ ವಿವಿದ ಮಾದರಿಗಳು ರೂಪಾಯಿ 5 ರಿಂದ 7.5 ಲಕ್ಶಗಳಾಗಿರುತ್ತವೆ.

ಕಾರು ಮಾರಾಟದಲ್ಲಿ ಇಂಡಿಕಾದಂತಹ ಮಾದರಿಯಲ್ಲಿ ಅಚ್ಚಳಿಯದ ಗೆಲುವು ಕಂಡಿದ್ದರೂ ಟಾಟಾ ಅಗ್ಗದ ಕಾರು ಮಾಡುವ ಆದರೆ ಗುಣಮಟ್ಟಕ್ಕೆ ಅಶ್ಟೇನೂ ಒತ್ತುಕೊಡದ ಕೂಟ ಅಂತಿರುವ ಅನಿಸಿಕೆಯನ್ನು ಜೆಸ್ಟ್ ತೊಡೆದುಹಾಕಬಲ್ಲದೇ?… ಕಾದು ನೋಡೋಣ.Categories: ಅರಿಮೆ

ಟ್ಯಾಗ್ ಗಳು:, , , , , , , , , , , , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s