ಮಾಡಿ ನೋಡಿ ಈ ಬಾಡೂಟ – ಪೋರ‍್ಕ್ ಪ್ರೈ

– ರೇಶ್ಮಾ ಸುದೀರ್.

IMG-20140820-WA0003 (1)

 

ಬೇಕಾಗುವ ಸಾಮಾಗ್ರಿಗಳು:

ಹಂದಿಮಾಂಸ (Pork) ————–1 ಕೆ.ಜಿ
ಅಚ್ಚಕಾರದ ಪುಡಿ——-6 ಟಿ ಚಮಚ
ದನಿಯಪುಡಿ———–1 ಟಿ ಚಮಚ
ಅರಿಸಿನ ಪುಡಿ———-1/4 ಟಿ ಚಮಚ
ಜೀರಿಗೆ ಪುಡಿ———–1 ಟಿ ಚಮಚ
ನೀರುಳ್ಳಿ————–1 ಗಡ್ದೆ
ಬೆಳ್ಳುಳ್ಳಿ—————1 ಗಡ್ಡೆ
ಕಂಚಿಹುಳಿ————- 1 ಇಲ್ಲವೇ ನಿಂಬೆಹುಳಿ 1
ಶುಂಟಿ—————-ಸ್ವಲ್ಪ
ಉಪ್ಪು ರುಚಿಗೆ ತಕ್ಕಶ್ಟು

ಮಾಡುವ ಬಗೆ:
ಶುಚಿ ಮಾಡಿದ ಮಾಂಸವನ್ನು ಕುಕ್ಕರ್ ಗೆ ಹಾಕಿ ಇದಕ್ಕೆ ದಪ್ಪಗೆ ಜಜ್ಜಿದ ಶುಂಟಿ, ಬೆಳ್ಳುಳ್ಳಿ, ಅರಿಸಿನ, ತೆಳ್ಳಗೆ ಹೆಚ್ಚಿದ ನೀರುಳ್ಳಿ ಮತ್ತು ಉಪ್ಪನ್ನು ಹಾಕಿ ಒಲೆಯ ಮೇಲಿಡಿ. ಮಾಂಸದ ನೀರು ಆರುವವರೆಗೆ ಆಗಾಗ ತಿರುಗಿಸಿ. ಸಂಪೂರ‍್ಣ ನೀರು ಆರಿದ ಮೇಲೆ ಒಂದು ದೊಡ್ದ ಲೋಟ ನೀರು ಹಾಕಿ ಮುಚ್ಚಳ ಮುಚ್ಚಿ, 2 ವಿಶಲ್ ಬರಿಸಿ. ಒಂದು ಬಾಣಲೆಯಲ್ಲಿ ಕಾರದಪುಡಿ, ದನಿಯಪುಡಿಯನ್ನು ಸಣ್ಣ ಉರಿಯಲ್ಲಿ ಕಂದುಬಣ್ಣ ಬರುವವರೆಗೆ ಹುರಿದುಕೊಳ್ಳಿ (ಹೆಚ್ಚಾಗಿ ಹುರಿದರೆ ಕಹಿರುಚಿ ಬರುತ್ತೆ). ಈಗ ಬೆಂದ ಮಾಂಸಕ್ಕೆ ಹುರಿದ ಮಿಶ್ರಣ ಮತ್ತು ಜೀರಿಗೆಪುಡಿ, ಕಂಚಿಹುಳಿ ಹಾಕಿ ಒಲೆಯ ಮೇಲಿಟ್ಟು ತಿರುಗಿಸಿ. ಸಲ್ಪ ರಸ ಇದ್ದರೆ ಅಕ್ಕಿ ರೊಟ್ಟಿಯೊಂದಿಗೆ ತಿನ್ನಲು ಚೆನ್ನಾಗಿರುತ್ತೆ. ಪೂರ‍್ತಿ ನೀರು ಆರಿದರೆ ಡ್ರೈ ಆಗಿ ಅನ್ನ ಹಾಗು ತಿಳಿಸಾರಿನೊಂದಿಗೆ ತಿನ್ನಲು ಚೆನ್ನಾಗಿರುತ್ತೆ, ಆಯ್ಕೆ ನಿಮ್ಮದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: