ಸ್ನೂಕರ್: ಒಂದು ಕಿರುನೋಟ

-ಬಾಬು ಅಜಯ್.

ಸ್ನೂಕರ್ ಒಂದು ಬಗೆಯ ನಿಡುಗೋಲಾಟ (Cue Sport), ಇದು ಇಂಗ್ಲೀಶ್ ಮಾತನಾಡುವ ಮತ್ತು ಹಲವಾರು ಕಾಮನ್ವೆಲ್ತ್ ನಾಡು ಗಳಲ್ಲಿ ಹೆಸರುವಾಸಿಯಾಗಿರುವ ಆಟ. ಈ ಆಟವನ್ನು ಮೊದಮೊದಲು ಇಂಡಿಯಾದಲ್ಲಿ ನೆಲೆಸಿದ್ದ ಬ್ರಿಟಿಶ್ ಅದಿಕಾರಿಗಳು ಆಡುತ್ತಿದ್ದರು ಎನ್ನಲಾಗುತ್ತದೆ ಮತ್ತು ಇಲ್ಲಿಂದ ಇದು ಬೇರೆ ನಾಡುಗಳಿಗೂ ಹಬ್ಬಿತು.

ಈ ಆಟವನ್ನು ಹಸಿರು ಬಣ್ಣದ ಬಟ್ಟೆಯಲ್ಲಿ ಮುಚ್ಚಿದ ಒಂದು ಮೇಜಿನ ಮೇಲೆ ಆಡಲಾಗುತ್ತದೆ.ಇದನ್ನು ಸ್ನೂಕರ್ ಮೇಜು ಎಂದು ಕರೆಯಲಾಗುತ್ತೆ. ನಾಲ್ಕು ಮೂಲೆಗಳಲ್ಲಿ ಒಂದೊಂದು ಪಾಕೆಟ್ ಇದ್ದು, ಉದ್ದನೆಯ ಬಾಗದ ನಡುವಿನಲ್ಲಿ ಮತ್ತೆರಡು ಪಾಕೆಟ್ ಗಳು ಇದ್ದು, ಒಟ್ಟು ಆರು ಪಾಕೆಟ್ ಗಳಿರುತ್ತವೆ. ಸ್ನೂಕರ್ ಆಟವನ್ನು ಒಂದು ನಿಡುಗೋಲು ಮತ್ತು 22 ಸ್ನೂಕರ್ ಚೆಂಡುಗಳಿಂದ ಆಡಲಾಗುತ್ತೆ. ಒಂದು ಬಿಳಿ ಕ್ಯೂ ಚೆಂಡು, 15 ಕೆಂಪು ಚೆಂಡುಗಳು, ಹಳದಿ, ಹಸಿರು, ಕಂದು, ನೀಲಿ, ಗುಲಾಬಿ, ಕಪ್ಪು ಬಣ್ಣದ ಒಂದೊಂದು ಚೆಂಡುಗಳು ಇರುತ್ತವೆ.

ಆಟದ ಶುರುವಿನ ಮೊದಲು ಕೆಂಪು ಚೆಂಡುಗಳನ್ನು ಮುಕ್ಕೋನ (triangle) ರಚನೆಯಲ್ಲಿ ಇಡಲಾಗುತ್ತದೆ ಮತ್ತು ಉಳಿದ ಬಣ್ಣದ ಚೆಂಡುಗಳನ್ನು ಮೇಜಿನ ಮೇಲೆ ಗುರುತಿಸಿದ ಎಡೆಗಳಲ್ಲಿ (marked positions ) ಇಡಲಾಗುತ್ತದೆ. ಈ ಸ್ತಾನಗಳನ್ನು “ಚುಕ್ಕೆಗಳು (spots) ” ಎಂದು ಕೂಡ ಕರೆಯಲಾಗುತ್ತದೆ . ಬಿಳಿ ಕ್ಯೂ ಚೆಂಡನ್ನು ಅರ‍್ದ ಸುತ್ತಿನಲ್ಲಿ (semi circle) ಇಟ್ಟು ಆಟ ಶುರು ಮಾಡಬೇಕು. ಈ ಕೆಳಗಿನ ಚಿತ್ರ ನೋಡಿ.

Snooker_1ಆಟಗಾರರು ನಿಡುಗೋಲಿನಿಂದ, ಬಿಳಿ ಚೆಂಡನ್ನು ಕೆಂಪು ಚೆಂಡಿಗೆ ಹೊಡೆಯುವ ಮೂಲಕ ಆಟವನ್ನು ಶುರುಮಾಡಬೇಕು. ಅಂಕಗಳನ್ನು ಪಡೆಯಲು ಒಬ್ಬ ಆಟಗಾರ ಬಿಳಿ ಚೆಂಡಿನಿಂದ ಕೆಂಪು ಚೆಂಡನ್ನು ಮತ್ತು ಬೇರೆ ಬಣ್ಣದ ಚೆಂಡನ್ನು(ಅದೇ ಕ್ರಮದಲ್ಲಿ ) , ಪಾಕೆಟ್ ಗಳಿಗೆ ಕಳಿಸಬೇಕು. ಆಟಗಾರ ತಪ್ಪು(foul) ಮಾಡಿದಲ್ಲಿ ಎದುರಾಳಿಗೆ ಅಂಕಗಳನ್ನು ನೀಡಲಾಗುತ್ತದೆ.

snooker_2ಯಾರು ಒಂದು ಪ್ರೇಮ್ ಸ್ನೂಕರ್ ಆಟದಲ್ಲಿ ಹೆಚ್ಚು ಅಂಕಗಳನ್ನು ಗಳಿಸುತ್ತಾರೋ, ಅವರನ್ನು ಆ ಪ್ರೇಮ್ ಗೆಲ್ಲುಗ ಎಂದು ತೀರ‍್ಮಾನಿಸಲಾಗುತ್ತದೆ. ಒಂದು ಸ್ನೂಕರ್ ಮ್ಯಾಚ್ ನಲ್ಲಿ ಯಾರು ಹೆಚ್ಚು ಪ್ರೇಮ್ ಗೆಲ್ಲುತ್ತಾರೋ ಅವರು ಆ ಪಂದ್ಯದ ಗೆಲ್ಲುಗ ಎಂದು ತೀರ‍್ಮಾನಿಸಲಾಗುತ್ತದೆ. ಪ್ರತಿ ವರುಶ ಏಪ್ರಿಲ್-ಮೇ ತಿಂಗಳಲ್ಲಿ ವಿಶ್ವ ಸ್ನೂಕರ್ ಚಾಂಪಿಯನ್ ಶಿಪ್ ಇಂಗ್ಲೆಂಡ್ ನ ಶೇಪಿಲ್ಡ್ ನಲ್ಲಿರುವ (Sheffield, England.) ಕ್ರೂಸಿಬಲ್ ತಿಯೇಟರ್ ನಲ್ಲಿ ನಡೆಸಲಾಗುತ್ತೆ. ಈ ಬಾರಿಯ ವಿಶ್ವ ಸ್ನೂಕರ್ ಚಾಂಪಿಯನ್ ಶಿಪ್ ನಲ್ಲಿ ರೊನ್ನಿ ಓ ಸುಲ್ಲಿವನ್ (Ronnie ‘O Sullivan) ಅವರನ್ನು ಸೋಲಿಸುವ ಮೂಲಕ ಮೊದಲ ಬಾರಿಗೆ ಮಾರ‍್ಕ್ ಸೇಲ್ಬಿ (Mark Selby) ಅವರು ವಿಶ್ವ ಸ್ನೂಕರ್ ಚಾಂಪಿಯನ್ ಶಿಪ್ ಗೆದ್ದರು.

ಮುಂದಿನ ಬರಹದಲ್ಲಿ ಸ್ನೂಕರ್ ಆಟದ ದಿಗ್ಗಜರು ಎಂದೇ ಹೆಸರುವಾಸಿಯಾದ ಆಟಗಾರರ ಬಗ್ಗೆ ತಿಳಿದುಕೊಳ್ಳೋಣ .

(ಮಾಹಿತಿ ಸೆಲೆ: ವಿಕಿ)
(ಚಿತ್ರ ಸೆಲೆ: ವಿಕಿ, ಸ್ನೂಕರ್ ಕೋಚಿಂಗ್ )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 22/12/2014

    […] ಹಿಂದಿನ ಬರಹದಲ್ಲಿ ನಿಡುಗೋಲಾಟದ (snooker) ಬಗ್ಗೆ ತಿಳಿದುಕೊಂಡಿದ್ದೆವು. ಈ ಬರಹದಲ್ಲಿ ಸ್ನೂಕರ್‌ನಲ್ಲಿ ಬಹಳ ಹೆಸರುವಾಸಿಯಾದ ಆಟಗಾರರ ಬಗ್ಗೆ ತಿಳಿದುಕೊಳ್ಳೋಣ. ಇಲ್ಲಿ ಬಹಳ ಹೆಸರುವಾಸಿಯಾದ 4 ಆಟಗಾರರ ಪರಿಚಯ ಮಾಡಿಸುತ್ತೇನೆ. […]

ಅನಿಸಿಕೆ ಬರೆಯಿರಿ:

%d bloggers like this: