ಸುತ್ತಾಡುಗೆಯಿಂದ ಹೆಚ್ಚು ಗಳಿಕೆ ಹೊಂದಿರುವ ಊರುಗಳು

– ಅನ್ನದಾನೇಶ ಶಿ. ಸಂಕದಾಳ.

tourist-spending-2015

‘ಮಾಸ್ಟರ್ ಕಾರ‍್ಡ್ 2015 ಗ್ಲೋಬಲ್ ಡೆಸ್ಟಿನೇಶನ್ ಸಿಟಿಸ್ ಇಂಡೆಕ್ಸ್’ ವರದಿಯ ಪ್ರಕಾರ, ಲಂಡನ್ ನಗರವು ಸುತ್ತಾಟಕ್ಕೆ (tour) ನೆಚ್ಚಿನ ನಗರವಾಗಿದ್ದು, ಸುತ್ತಾಡುಗರು (tourists) ಹೆಚ್ಚು ಹಣವನ್ನು ಈ ನಗರದಲ್ಲಿ ಕರ‍್ಚು ಮಾಡುತ್ತಾರೆ ಎಂದು ತಿಳಿದು ಬಂದಿದೆ. 132 ನಗರಗಳನ್ನು ಗಣನೆಗೆ ತೆಗೆದುಕೊಂಡು, ಹೊರನಾಡಿನ ಸುತ್ತಾಡುಗರು ಈ ನಗರಗಳಲ್ಲಿ ಎಶ್ಟು ಕರ‍್ಚು ಮಾಡುವರು ಎಂಬ ಆದಾರದ ಮೇಲೆ ಈ ವರದಿಯನ್ನು ಹೊರತರಲಾಗಿದೆ.

2015 ರಲ್ಲಿ ಲಂಡನ್ನಿಗೆ ಬೇಟಿ ನೀಡಿದ್ದ ಸುತ್ತಾಡುಗರು 20.23 ಬಿಲಿಯನ್ ಡಾಲರುಗಳಶ್ಟು ಕರ‍್ಚು ಮಾಡಿರಬಹುದೆಂದು ಅಂದಾಜಿಸಲಾಗಿದೆ. ಸುತ್ತಾಡುಗರು ಲಂಡನ್ ನಲ್ಲಿ, 2014 ವರುಶದಲ್ಲಿ ಕರ‍್ಚು ಮಾಡಿದ ಮೊತ್ತಕ್ಕೆ ಹೋಲಿಸಿ ನೋಡಿದರೆ 2015 ರಲ್ಲಿ ಶೇ 2.3 ರಶ್ಟು ಹೆಚ್ಚಿಗೆ ಕರ‍್ಚು ಮಾಡಿದ್ದಾರೆ. ಈ ಕಾರಣದಿಂದ ನಗರವೊಂದರಲ್ಲಿ ಹೊರನಾಡಿನ ಸುತ್ತಾಡುಗರು ಮಾಡುವ ಕರ‍್ಚುಗಳ ವಿಚಾರದಲ್ಲಿ ಲಂಡನ್ ಮೊದಲನೇ ಸ್ತಾನದಲ್ಲಿದೆ. ನ್ಯೂಯಾರ‍್ಕ್ ಈ ವಿಚಾರದಲ್ಲಿ ಎರಡನೇ ಸ್ತಾನದಲ್ಲಿದೆ. ನ್ಯೂಯಾರ‍್ಕ್ ನಲ್ಲಿ 2015 ರಲ್ಲಿ ಸುತ್ತಾಡುಗರು 17.37 ಬಿಲಿಯನ್ ಡಾಲರುಗಳಶ್ಟು ಕರ‍್ಚು ಮಾಡಿದ್ದಾರೆ. ಪ್ಯಾರಿಸ್ ಮೂರನೇ ಸ್ತಾನದಲ್ಲಿದ್ದು ಆ ನಗರವು 16.61 ಬಿಲಿಯನ್ ಡಾಲರುಗಳ ವಹಿವಾಟುಗಳನ್ನು ಸುತ್ತಾಡುಗೆಯಿಂದ (tourism) ನಡೆಸಿದೆ. ತೆಂಕಣ ಕೊರಿಯಾದ ಸೋಲ್, ಸಿಂಗಾಪುರ ಮತ್ತು ಬಾರ‍್ಸಿಲೋನ ನಗರಗಳೂ ಮೊದಲ ಹತ್ತರಲ್ಲಿ ಸ್ತಾನ ಪಡೆದಿವೆ.

ಏಳನೇ ಸ್ತಾನದಲ್ಲಿರುವ ಬ್ಯಾಂಕಾಕ್, 2015 ರಲ್ಲಿ 12.36 ಬಿಲಿಯನ್ ಡಾಲರುಗಳಶ್ಟು ಗಳಿಕೆಯನ್ನು ಸುತ್ತಾಡುಗೆ ಉದ್ದಿಮೆಯಿಂದ ಹೊಂದಿದೆ ಎಂದು ಅಂದಾಜಿಸಲಾಗಿದ್ದು, ಈ ಮೊತ್ತವು 2014 ವರುಶಕ್ಕೆ ಹೋಲಿಸಿ ನೋಡಿದಾಗ ಶೇ 11.8 ರಶ್ಟು ಹೆಚ್ಚಳ ಕಂಡಿದೆ. ಬ್ಯಾಂಕಾಕ್ ನಗರವು ಹೆಚ್ಚು ಹೆಚ್ಚು ಹೊರನಾಡಿನ ಮಂದಿಯನ್ನು ಸೆಳೆಯುತ್ತಾ ಸುತ್ತಾಡುಗೆಯ ಗಳಿಕೆಯಲ್ಲಿ ಅತಿ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ನಗರ ಎಂದೆನಿಸಿಕೊಂಡಿದೆ. 2015 ರಲ್ಲಿ ಟೋಕಿಯೋ ನಗರವು, ಸುತ್ತಾಡುಗೆಯಿಂದ ಪಡೆಯುವ ಗಳಿಕೆಯಲ್ಲಿ ಶೇ 6.8 ರಶ್ಟು ಇಳಿಮುಕ ಕಂಡಿದ್ದರಿಂದ ಮೊದಲ ಹತ್ತರಲ್ಲಿ ಸ್ತಾನ ಪಡೆದಿಲ್ಲ. ಸಿಡ್ನಿ ನಗರವೂ ಕೂಡ 2015 ರಲ್ಲಿ ಸುತ್ತಾಡುಗರ ವಹಿವಾಟುಗಳಲ್ಲಿ ಶೇ 4.8 ರಶ್ಟು ಇಳಿಮುಕ ಕಂಡಿದೆ.

ಡಾಲರ್ ಸಲುವಳಿಯನ್ನು (currency) ಬಳಸಿ ಸುತ್ತಾಡುಗರ ಕರ‍್ಚನ್ನು ಅಂದಾಜಿಸಲಾಗುತ್ತದೆ. ಅಮೆರಿಕಾದ ಡಾಲರ್ ಎದುರು ಕೆಲವು ನಾಡುಗಳ ಸಲುವಳಿ ಕುಸಿತ ಕಂಡದ್ದರಿಂದ, ಆ ನಾಡುಗಳು ಸುತ್ತಾಡುಗೆಯಿಂದ ಹೊಂದುವ ಗಳಿಕೆಯಲ್ಲೂ ಕುಸಿತ ಕಂಡಿದೆ. ತೈಲ್ಯಾಂಡ್, ಮಲೇಶ್ಯಾ ಮತ್ತು ಟರ‍್ಕಿ ನಾಡುಗಳ ಸಲುವಳಿ ಡಾಲರ್ ಎದುರು ಕಡಿಮೆ ಬೆಲೆ ಹೊಂದಿದ್ದರೂ, ಈ ನಾಡುಗಳಿಗೆ ಬೇಟಿ ನೀಡಿದ ಹೊರನಾಡಿನ ಮಂದಿ, ಈ ನಾಡುಗಳಲ್ಲಿ ಹೆಚ್ಚು ವಹಿವಾಟು ನಡೆಸಿದ್ದರಿಂದ ಅದು ಸಲುವಳಿ ಕುಸಿತವನ್ನು ಸರಿದೂಗಿಸಲು ನೆರವಾಗಿದೆ.

( ಮಾಹಿತಿ ಮತ್ತು ಚಿತ್ರ ಸೆಲೆ : agenda.weforum.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications