ಕಣ್ಣ ಹನಿಯೊಂದು ಮಾತಾಡಿದೆ

– ನಾಗರಾಜ್ ಬದ್ರಾ.

Tears-of-the-heart

ಕಣ್ಣ ಹನಿಯೊಂದು ಮಾತಾಡಿದೆ
ತನ್ನ ಒಲುಮೆಯ ವೇದನೆಯನ್ನು ಹರಿಬಿಟ್ಟಿದೆ

ಹಗಲು ರಾತ್ರಿ ಯಾವುದೆಂದು ತಿಳಿಯಲಾಗಿದೆ
ಅವಳ ನೆನಪಿನಲ್ಲಿಯೇ ಕಳೆದು ಹೋಗಿವೆ

ಬದುಕಿದ್ದರೂ ಉಸಿರೇ ಇಲ್ಲವಾಗಿದೆ
ಅವಳನ್ನು ಪಡೆಯಲು ಹ್ರುದಯ ತಪಸ್ಸಿಗೆ ಜಾರಿದೆ

ಕುಶಿಯಲ್ಲಿಯೂ ನಗುವೇ ಮಾಯವಾಗಿದೆ
ಅವಳ ಹುಡುಕಾಟದಲ್ಲಿಯೇ ಮಗ್ನನಾಗಿದೆ

ಎಲ್ಲವನ್ನೂ ಪಡೆದರು ಏನೋ ಕಳೆದುಕೊಂಡ ಯಾತನೆ ಮನೆಮಾಡಿದೆ
ಅವಳಿಲ್ಲದ ನೋವು ಎದೆಯಾಳದಲ್ಲಿ ಅಡಗಿದೆ

ಬೆಳಕಿನಲ್ಲಿಯೂ ಕಣ್ಣುಗಳಲ್ಲಿ ಅಂದಕಾರವು ಆವರಿಸಿದೆ
ಅವಳನ್ನು ಕಾಣುವ ಹಟದಲ್ಲಿ ಸೋತಿವೆ

ಅಸುನೀಗುವ ಈ ವೇದನೆಗೆ ಕೊನೆಯಾದರೂ ಎಂದು
ನನ್ನಿಂದಾದ ತಪ್ಪಾದರೂ ಏನು ಎಂಬುದು ತಿಳಿಯದಾಗಿದೆ

(ಚಿತ್ರ ಸೆಲೆ: healingwithdrcraig.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *