ಎಲ್ಲಕ್ಕೂ ಇವೆ ಆ ಕೊನೆಗಳು..

– ಪ್ರತಿಬಾ ಶ್ರೀನಿವಾಸ್.

alone

ಪಯಣ ಮೊದಲ್ಗೊಂಡಿತು ಗುರಿಯತ್ತ
ಹೊರಟ ಪಯಣಿಗ ನಾನೊಬ್ಬನೇ
ಗೊತ್ತಿಲ್ಲದ ಊರ ಕಡೆಗೆ
ಗುರಿ ಹುಡುಕುವ ದಾರಿ ಕಡೆಗೆ

ಪಯಣದ ಜೊತೆ ಜೊತೆ
ಗೆಳೆಯರ ಹುಡುಕಾಟ
ಗೆಳೆಯರು ಸಿಕ್ಕೊಡನೆ
ಮತ್ತದೆ ಸಲುಗೆಯ ತುಂಟಾಟ

ಸೋನೆಮಳೆ ಹನಿಯುವ ಹೊತ್ತಿಗೆ
ಸದ್ದಿಲ್ಲದೇ ಚಿಗುರೊಡೆದ ಬೆಸುಗೆಗಳು
ಹನಿಯೆಂದರೇ, ಕೊಳಕಿಲ್ಲದ ನಿಜ ಮನಗಳು
ಅಂತೆಯೇ ಇಂದಿಗೂ ಉಳಿಯಿತು ಬೆಸುಗೆಗಳು

ಪಯಣದ ಏಳು-ಬೀಳುಗಳು
ಕಲಿಕೆಯ ಓದು-ಬರಹಗಳು
ಗೆಳೆಯರ ಆಟ-ತುಂಟಾಟಗಳು
ಎಲ್ಲಕ್ಕೂ ಇವೆ ಆ ಕೊನೆಗಳು
ನನಗೂ ಕಾಡುತಿದೆ ವಿರಾಮದ ಗೋಡೆಗಳು

ಗುರುಗಳ ಕಲಿಸುಗೆಯಿಂದ
ಗುರಿಯ ದಾರಿ ಸಿಕ್ಕಿದೆ
ಏಳ್ಗೆಗೆ ಬುನಾದಿ ಹಾಕಿದೆ
ಗೆಳೆಯರ ಆ ಒಡನಾಟಗಳು
ಈಗ ಸವಿ ನೆನಪಾಗಿ ಉಳಿದಿದೆ

( ಚಿತ್ರ ಸೆಲೆ: imageshunt.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: