ಮತ್ತದೇ ಕನಸಿನ ಹೊದಿಕೆ

– ಸಿಂದು ಬಾರ‍್ಗವ್.

dreamworldಜೀವನದ ಸಂತೆಯಲಿ
ಕೊಂಡುಕೊಳ್ಳದೇ ಉಳಿದಿರುವ ಬಾವನೆಗಳು
ಮಾರಲಾಗದೇ ಕುಳಿತಿರುವ ಪ್ರೀತಿಗಳು

ಕೊಳೆತು ಹೋದ ಕನಸುಗಳು
ಬಾಡಿಹೋದ ಚಡಪಡಿಕೆಗಳು

ರಾಶಿಯಲಿ ಬೆಂದುಹೋದ ಬಿಸಿಕಣ್ಣೀರು
ಆಗಾಗ ಮನಸಿಗೆ ಮಳೆಯ ಪನ್ನೀರು

ಅರೆಬರೆ ನೋಟ ಬೀರುವ ಕೊಳ್ಳುಬಾಕ
ಮಾನ ಮುಚ್ಚಿಕೊಳ್ಳುವ ವ್ಯಾಪಾರಿಗ

ಹೊಗೆದೂಳು ಬರಿತ ಹಸಿವಿನ ಬುತ್ತಿ
ಕಸಿದು ತಿನ್ನುತಿವೆ ಕಾಗೆಗಳು ಕುತ್ತಿಕುತ್ತಿ

ನಿಂತಲ್ಲೆ ನಿದಿರೆ
ಮತ್ತದೇ ಕನಸಿನ ಹೊದಿಕೆ

( ಚಿತ್ರ ಸೆಲೆ: newhdwallpaper.in )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: