ಮೇಕೆದಾಟು – ಇಂದಿಗೂ ನಾಳೆಗೂ ಎಂದೆಂದಿಗೂ

– ನವೀನ ಪುಟ್ಟಪ್ಪನವರ.

img_20161008_154009

ಮುಂಜಾವಿನ ಮೋಡ ಕತ್ತಲಿನ ಕಿಟಕಿ ತೆರೆಯುತಿರಲು
ಅರೆಬರೆ ಕನಸುಗಳ ಚಿತ್ರಣ ಕಾಣುತಿರಲು
ಕಲಿಯುಗದ ಮೊಬೈಲ್ ಅಲಾರಾಮ್ ಕಿರಿಕಿರಿ
ಗಂಟೆ ಆರಾಗುತಿರಲು
ನಿಸರ‍್ಗದ ಮಡಿಲಲ್ಲಿ ತೇಲಲು ತರಾತುರಿ
ಮೊಗ್ಗಿನ ಕುತೂಹಲದ
ಕವಲುದಾರಿಗೆ ಅರಳಿದ ಮೈಸಿರಿ

ಹಸಿವಿನ ತಾಳಕ್ಕೆ ಮೇಳವಾದ
ತವರುಮನೆ ತಟ್ಟೆ ಇಡ್ಲಿ
ಹ್ರುದಯದ ಮೌನವನ್ನು
ಆಲಿಸಿದ ಪಿರಮಿಡ್ ವ್ಯಾಲಿ
ಕೆಸರಿನಲ್ಲಿ ಅರಳಿದ ಕಮಲ
ನೆನಪಿನ ಮುತ್ತುಗಳ ಹವಳ

ಚುಂಚಿ ಪಾಲ್ಸ್ ಅರಸಿ ಹೊರಟ ಪಯಣ
ಕೆಂಡದ ಬಿಸಿಲಿಗೆ ಮಂಕಾದ ನಯನ
ಜುಳು-ಜುಳು ಹರಿಯುವ ನೀರು ಕೇಳಿದ ಕ್ಶಣ
ಮನದ ಬುಗ್ಗೆಗೆ ಎಲ್ಲಿಲ್ಲದ ಉಲ್ಲಾಸ ವಿನೂತನ
ಹರಿದು ಕೊರೆದು, ಪ್ರಕ್ರುತಿಗೆ ಸವೆದ
ಬಂಡೆಗಳ ಐಸಿರಿ ತಲ್ಲಣ

ಸೂರ‍್ಯನ ಪ್ರಕಾಶ ಕಿರಣಗಳನ್ನು
ತಂಪಾಗಿಸಿದ ಕಾವೇರಿಯ ಪ್ರಕ್ರುತಿ ಸೆರಗು
ಕಣ್ಣಂಚಲಿ ಆನಂದದ ಹೊಳೆ ಹರಿಸಿದ
ಕಾವೇರಿ-ಅರ‍್ಕಾವತಿ ಸಂಗಮದ ಮೆರಗು
ಕಡಿದಾದ ಶಿಲೆಗಳಲ್ಲಿ ದಾಟಿದ ಶಿವನ
ಮೇಕೆಯ ಹೆಜ್ಜೆಗುರುತ ಚಿತ್ರಣ
ಇಂದಿಗೂ ನಾಳೆಗೂ ಎಂದೆಂದಿಗೂ

(ಚಿತ್ರಸೆಲೆ: ನವೀನ ಪುಟ್ಟಪ್ಪನವರ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: