ಚುಟುಕುಗಳು

– ಕಿಶೋರ್ ಕುಮಾರ್.

*** ಕೋಪ ***

ಯಾರಿಗಾಗಿ ಈ ಕೋಪ
ಏತಕ್ಕಾಗಿ ಈ ತಾಪ
ಕ್ಶಣಿಕ ಇದ್ದು ಹೋಗುವುದು
ಬದುಕಿಗಾಗುವಶ್ಟು ಬಿರುಕ ನೀಡುವುದು

*** ಕುಡಿತ ***

ಮೋಜಿಗಾಗಿ ಮೊದಲು ಮಾಡಿ
ಮತ್ತಿಗಾಗಿ ಮುಂದುವರೆಸಿ
ಚಟವ ಹಿಡಿತದಲ್ಲಿಡದೆ
ತನುವ ಕೊಲ್ಲುವುದು ತರವೇ?

*** ದುಡ್ಡು ***

ಲೆಕ್ಕವಿರಲಿ ಬಾಳಿನಲಿ
ದುಡ್ಡು ಆ ಲೆಕ್ಕದಲಿ ಸೇರಿರಲಿ
ದುಡ್ಡೊಂದೇ ಬಾಳಲ್ಲ
ಅದಿಲ್ಲದ ಬಾಳು ಸುಲಬವೂ ಅಲ್ಲ

*** ಸಿಹಿ ಮಾತು ***

ಸಿಹಿಯಾಗಿರಲಿ ಮಾತು
ಕಿವಿಗೂ ತಂಪು ಮನಸಿಗೂ ಇಂಪು
ಎಲ್ಲರಿಗೂ ಹಂಚಬಹುದು ದಿನವೂ
ಅದೊಂದು ಕರಗದ ಸಂಪತ್ತು

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks