ಮಾಡಿ ಸವಿಯಿರಿ ಕಡ್ಲೆಬೇಳೆ ಬೋಂಡಾ
– ಕಲ್ಪನಾ ಹೆಗಡೆ.
ದಸರಾ ಹಬ್ಬದಲ್ಲಿ ಮಾಡುವ ವಿಶೇಶ ತಿಂಡಿಗಳಲ್ಲಿ ಕಡ್ಲೆಬೇಳೆ ಬೋಂಡಾ ಅಚ್ಚುಮೆಚ್ಚಿನ ತಿಂಡಿ!!
ಬೇಕಾಗುವ ಪದಾರ‍್ತಗಳು:
1. 1/2 ಕೆ.ಜಿ ಕಡ್ಲೇಬೇಳೆ
2. 4 ಹಸಿಮೆಣಸಿನಕಾಯಿ
3. ಕೊತ್ತಂಬರಿ ಸೊಪ್ಪು
4. ಇಂಗು
5. ರುಚಿಗೆ ತಕ್ಕಶ್ಟು ಉಪ್ಪು
6. ಚೂರು ಶುಂಟಿ
7. ಅರ‍್ದ ಕಾಯಿ ಹೋಳು
ಮಾಡುವ ಬಗೆ:
ಮೊದಲು ಕಡ್ಲೆಬೇಳೆಯನ್ನು 2 ತಾಸುಗಳ ಕಾಲ ನೀರಿನಲ್ಲಿ ನೆನಿಸಿಡಿ. ಆಮೇಲೆ ಅದಕ್ಕೆ ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಇಂಗು, ಶುಂಟಿ, ರುಚಿಗೆ ತಕ್ಕಶ್ಟು ಉಪ್ಪು, ಅರಿಶಿನ ಪುಡಿ, ಕಾಯಿತುರಿ, ಶುಂಟಿ ಹಾಕಿ ಮಿಕ್ಸಿಯಲ್ಲಿ ಗಟ್ಟಿಯಾಗಿ ರುಬ್ಬಿಕೊಳ್ಳಿ. ಮೇಲಿಂದ ಬೇಕಾದಲ್ಲಿ ಕೊತ್ತಂಬರಿ ಸೊಪ್ಪು, ಕರಿಬೇವನ್ನು ಸಣ್ಣಗೆ ಹೆಚ್ಚಿ ಹಾಕಿ. ಆನಂತರ ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಅಂಗೈಯಲ್ಲಿ ಎಣ್ಣೆ ಸವರಿಕೊಂಡು ಚಿಕ್ಕ ಉಂಡೆಗಳನ್ನಾಗಿ ಮಾಡಿ ಅದನ್ನು ತಟ್ಟಿ ಬಾಣಲೆಗೆ ಬಿಡಿ. ಬೇಯುವತನಕ ಜಾಲಿಸೌಟಿನಿಂದ ಎರಡುಕಡೆ ತಿರುಗಿಸಿ ಬೇಯಿಸಿಕೊಳ್ಳಿ. ನೀವು ತಯಾರಿಸಿದ ಬೋಂಡಾವನ್ನು ತಿನ್ನಲು ನೀಡಿ.
ಇತ್ತೀಚಿನ ಅನಿಸಿಕೆಗಳು