ಇದೇ ನನ್ನ ಮೊದಲ ಪ್ರೇಮ ಪತ್ರ

– ಸುರಬಿ ಲತಾ.

love-letter1

ಇದೇ ನನ್ನ ಮೊದಲ ಪ್ರೇಮ ಪತ್ರ
ಬರೆದೆನು ನಿನಗೆ ಮಾತ್ರ
ಹ್ರುದಯದ ಮಾತು ಅರಿಯದೆ
ಬರೆದೆ ನನ್ನೊಲವು ನುಡಿಯಲಾಗದೆ|

ಗೆಳೆಯನೆಂದು ಕರೆಯಲು
ದೂರಾಗಿ ನೀ ಹೋಗಿಬಿಡುವೆ
ಇನಿಯನೆಂದು ಕೂಗಲು
ನಾ ನಾಚಿ ನೀರಾಗುವೆ
ಏನೆಂದು ಕರೆಯಲಿ ಚಿನ್ನ
ಪ್ರಾಣವೇ ನೀನಾಗಿರಲು ಚೆನ್ನ|

ಹೊಗಳಲು ಹೋಲಿಸಲಿ ಯಾರಿಗೆ
ನೀನಾದೆ ಸಿಂದೂರ ಬಾಳಿಗೆ

ಚುಕ್ಕಿಗಳಿಗೆ ಹೋಲಿಸಲೇ
ಅವು ಬಾನಿಗೆ ಸ್ವಂತ
ಚಂದ್ರಮನಿಗೆ ಹೋಲಿಸಲೇ
ಅವನು ಚಂದ್ರಮುಕಿಗೆ ಸ್ವಂತ
ಮಳೆಹನಿಗೆ ಹೋಲಿಸಲು
ಅದು ಮುಗಿಲಿಗೆ ಸ್ವಂತ|

ಒಡಲಲ್ಲಿ ಜರಿಯಂತೆ
ಹರಿವ ನಿನ್ನೊಲವು
ಯಾರಿಗೂ ಹೋಲಿಸಲಾಗದೇ
ಪದಗಳು ಸೋತು ಮೌನವಾದವು|

(ಚಿತ್ರ ಸೆಲೆ: themindfulword.org)Categories: ನಲ್ಬರಹ

ಟ್ಯಾಗ್ ಗಳು:, , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s