ಓ ಹೂವೇ ನೀನೆಶ್ಟು ಸುಂದರ..

ಗಂಗಾ ನಾಗರಾಜು.

Nature Photography

ಓ ಹೂವೇ ನೀನೆಶ್ಟು ಸುಂದರ?
ನೋಡಲು ಕಣ್ಗಳಿಗೆ ಮನೋಹರ
ಮನಸ್ಸಿಗಂತೂ ಆಹಾ! ಉಲ್ಲಾಸಕರ
***
ಸದಾ ಕೂಡಿಹುದು ದುಂಬಿಗಳ ಜೇಂಕಾರ
ಪ್ರೇಮಿಗಳಿಗೆ ನೀನೇ ಹೊನ್ನಾರ
ಕವಿಗಳ ಕಲ್ಪನೆಯ ಚಮತ್ಕಾರ
***
ಓ ಹೂವೇ ನೀನೆಶ್ಟು ಸುಂದರ?
ದೇವರ ಕೊರಳಲ್ಲಿ ನೀನೆ ಹಾರ
ನೀ ಹೊರಸೂಸುವ ಪರಿಮಳ ಆಹ್ಲಾದಕರ
***
ಸಮಾರಂಬಗಳಲ್ಲಿ  ನಿನ್ನಿಂದಲೇ ಸತ್ಕಾರ
ಕಲೆಗಾರರ ಕೈಕುಂಚಕೆ ಸ್ಪೂರ‍್ತಿ ನಿನ್ನಾಕಾರ
ಕೊನೆಯಾತ್ರೆಯಲಿ ಮಹನೀಯರಿಗೆ
ನಿನ್ನಿಂದಲೇ ಅಂತಿಮ ಸಂಸ್ಕಾರ
ಹೂವೇ ನೀನೇಶ್ಟು ಸುಂದರ! ಅಶ್ಟೇ ಮಹತ್ತರ!!

(ಚಿತ್ರ ಸೆಲೆ – wikimedia.org)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.