ಕೇಳೆ ನೀ ಜಾಣೆ..

– ಅಂಕುಶ್ ಬಿ.

love3

ಕೇಳೆ ನೀ ಜಾಣೆ
ನನ್ನ ಮನದನ್ನೆ
ಮನಸು ಕದ್ದವಳು ನೀನೆ

ನನ್ನೆದೆಯ ಗುಡಿಯಲ್ಲಿ
ಹಣತೆಯನು ಹಚ್ಚಿ
ಬೆಳಕು ಚೆಲ್ಲಿದವಳು ನೀನೆ

ಕಪ್ಪು ಕಣ್ಣಿನ ಕಡಲು
ಗಾಳಿಗಾಡುತಿರಲು ಮುಂಗುರುಳು
ಬೆಳದಿಂಗಳು ನಿನ್ನ ನಗುವು

ಕಣ್ಣ ಹುಬ್ಬಿನ ಆಟ
ಆ ನಿನ್ನ ಮೈಮಾಟ
ವರ‍್ಣಿಸಲು ಸಾಲದು ಸಾಲು

ನೂರು ಬಾವಗಳ ವೀಣೆ
ಶ್ರುತಿಯನ್ನು ನೀ ಮೀಟಿ
ಎಲ್ಲಿ ಹೋದೆಯೆ ಜಾಣೆ

ಜೀವನವೇ ಚದುರಂಗ
ನಾನೊಬ್ಬ ಮರಿಮಂಗ
ನನ್ನ ಕುಣಿಸಲು ಬೇಡ ಮಾಯಾಂಗನೆ

(ಚಿತ್ರಸೆಲೆ: shushi168.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *