ಕೆಂಪು ಹಸಿಮೆಣಸಿನಕಾಯಿ ಚಟ್ನಿಯನ್ನು ಮಾಡುವ ಬಗೆ
– ಕಲ್ಪನಾ ಹೆಗಡೆ.
ಕೆಂಪು ಹಸಿಮೆಣಸಿನಕಾಯಿಯ ಚಟ್ನಿ ಮಾಡಿ ರುಚಿ ನೋಡ್ತಿರಾ? ಹಾಗಿದ್ದಲ್ಲಿ ಇಲ್ಲಿದೆ ಅದನ್ನು ಮಾಡುವ ಬಗೆ!
ಬೇಕಾಗುವ ಪದಾರ‍್ತಗಳು:
1. 1/4 ಕೆ.ಜಿ. ಕೆಂಪು ಹಸಿಮೆಣಸಿನಕಾಯಿ
2. 50 ಗ್ರಾಂ ಹುಣಸೆಹಣ್ಣು
3. 25 ಗ್ರಾಂ ಬೆಲ್ಲ
4. 4 ಚಮಚ ಜೀರಿಗೆ
5. ಒಗ್ಗರಣೆಗೆ ಸಾಸಿವೆ, ಇಂಗು
6. ರುಚಿಗೆ ತಕ್ಕಶ್ಟು ಉಪ್ಪು
ಮಾಡುವ ಬಗೆ
ಮೊದಲು ಬಾಣಲೆಯಲ್ಲಿ ಕೆಂಪು ಹಸಿಮೆಣಸಿನಕಾಯಿ, ಇಂಗು, ಹುಣಸೆಹಣ್ಣು, ಜೀರಿಗೆಗೆ ಎಣ್ಣೆ ಹಾಕಿ ಹುರಿದುಕೊಳ್ಳಿ. ಆನಂತರ ಅದಕ್ಕೆ ಬೆಲ್ಲ, ಉಪ್ಪು ಹಾಕಿ ಮಿಕ್ಸಿಯಲ್ಲಿ ನೀರು ಹಾಕದೆ ಗಟ್ಟಿಯಾಗಿ ರುಬ್ಬಿಕೊಳ್ಳಿ. ಆಮೇಲೆ ಬಾಣಲೆಗೆ ಎಣ್ಣೆ, ಸಾಸಿವೆ, ಇಂಗು ಹಾಕಿ ಒಗ್ಗರಣೆ ಮಾಡಿ ಚೆನ್ನಾಗಿ ಕಲಸಿಕೊಳ್ಳಿ. ನೀವು ತಯಾರಿಸಿದ ಚಟ್ನಿಯನ್ನು ಚಪಾತಿಯೊಂದಿಗೆ, ಅನ್ನದೊಂದಿಗೆ ಅತವಾ ದೋಸೆಗೆ ನಂಚಿಕೊಳ್ಳಲು ಹಾಕಿ. ಅದರಲ್ಲೂ ನೀರು ದೋಸೆಗೆ ಚಟ್ನಿಗೆ ಸ್ವಲ್ಪ ಎಣ್ಣೆ ಹಾಕಿ ತಿನ್ನಲು ನೀಡಿ ತುಂಬಾ ಚೆನ್ನಾಗಿರತ್ತೆ. 2 ದಿನಕ್ಕೆ ಬೇಕಾದಶ್ಟು ಮಾತ್ರ ತೆಗೆದು ಉಳಿದ ಚಟ್ನಿಯನ್ನು ಪ್ರಿಜ್ಜಿನಲ್ಲಿ ಇಟ್ಟುಕೊಳ್ಳಿ. ನೀರು ತಾಗಿಸದೇ ಇದ್ದರೆ ಎರಡು ತಿಂಗಳಗಳ ಕಾಲ ಇಟ್ಟು ತಿನ್ನಬಹುದು.
ಇತ್ತೀಚಿನ ಅನಿಸಿಕೆಗಳು