ಬಡವರ ಬೆವರಹನಿ
ಹಸಿದವಗೆ ತುತ್ತು
ಅನ್ನಕೂ ಹಾಹಾಕಾರ,
ಹೊಟ್ಟೆ ತುಂಬಿದವಗೆ
ಆಹಾರವೂ ಸಸಾರ..
ಎಸೆದ ತಿನಿಸಿಗೂ
ಇಲ್ಲಿರುವುದು ಬೇಡಿಕೆ,
ಹಸಿದ ಹೊಟ್ಟೆಗಳದು
ಅದೇ ಕೋರಿಕೆ..
ಎಸೆಯುವ ಮೊದಲು
ಸ್ವಲ್ಪ ಯೋಚಿಸಿ,
ನಿಮಗೆಶ್ಟು ಬೇಕೋ
ಅಶ್ಟನ್ನೇ ಉಪಯೋಗಿಸಿ..
ದೂಳು, ನೊಣಗಳಿಗೂ
ಮರುಕ ಬರುವುದು,
ನಾಚಿಕೆ ಹುಟ್ಟಿಸುವ
ಜನರ ಗುಣವದು..
ಬಡವನ ಹಸಿವು
ಸಾಯುವವರೆಗೂ ನಿಲ್ಲದು,
ಸಿರಿಯನ ಹಸಿವು
ಸಾವಿನಾಚೆಗೂ ನಿಲ್ಲದು..
ರೈತರ ಬೆವರಹನಿ, ಬಡವನ ಕಣ್ಣಹನಿ
ಸುಡುವುದಂತೂ ನಿಜ,
ಪ್ರತಿಹನಿಗೂ ಬೆಲೆಕೊಡಲು
ಕಲಿಯಬೇಕು ಮನುಜ..
(ಚಿತ್ರ ಸೆಲೆ: news18.com)
ಇತ್ತೀಚಿನ ಅನಿಸಿಕೆಗಳು