ಹಣೆಬರಹವ ಬರೆಯುವಂತಿದ್ದರೆ

– ಸುರಬಿ ಲತಾ.

happyness-everywhere

ಬರಹವು ಬರೆದೆವು ಕಾಗದದಲಿ
ಬರೆಯುವಂತಿದ್ದರೆ ಹಣೆಯಲಿ
ಮನಗಳು ನಲಿಯುತ್ತಿದ್ದವು ಸಂತಸದಲಿ

ಹತಾಶೆ ನೋವುಗಳು ಇರುತ್ತಿರಲಿಲ್ಲ ಬಾಳಿನಲಿ
ಹಸಿರಂತೆ ಹರಡುತ್ತಿತ್ತು ನೆಮ್ಮದಿ ಜಗದಲಿ
ಬಡತನವೇ ಕಾಣುತ್ತಿರಲಿಲ್ಲ ಜನರಲಿ

ಮೇಲು ಕೀಳೆಂಬುದು ಮರೆಯಾಗುತ್ತಿತ್ತು
ಗಂಡು ಹೆಣ್ಣಿನ ಮದ್ಯೆ ಸಮವಾಗುತ್ತಿತ್ತು
ಒಂದೇ ಎಲ್ಲರೂ ಎಂಬ ಬಾವ ಮೂಡುತ್ತಿತ್ತು

ಸ್ವರ‍್ಣಮಯ ಲೋಕವಾಗುತ್ತಿತ್ತು
ಮಾನವ ದಾನವರ ಮನ ಒಂದಾಗುತ್ತಿತ್ತು
ಸ್ವಾರ‍್ತ ವು ಕಣ್ಮರೆ ಯಾಗುತ್ತಿತ್ತು

(ಚಿತ್ರ ಸೆಲೆ: kalw.org)

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.