ಮನ ನೀ ಬರುವ ಹಾದಿ ಕಾಯುತ್ತಿತ್ತು

– ಸುರಬಿ ಲತಾ.

sunsetlovers

ಇಂದೇನಾಯಿತು ನನ್ನ ಅಂದವೇ
ನನ್ನ ಕಣ್ಣು ಚುಚ್ಚಿತು

ತೊಟ್ಟ ಉಡುಗೆ ಬಿಗಿಯಾಯಿತು
ಇಂದೇಕೆ ಕೆನ್ನೆ ಕೆಂಪೇರಿತು

ನನ್ನ ಕಣ್ಣುಗಳು ನಿನ್ನೇ ಅರಸುತ್ತಿತ್ತು
ಮನ ನೀ ಬರುವ ಹಾದಿ ಕಾಯುತ್ತಿತ್ತು

ಅದರಗಳು ನಿನ್ನ ಹೆಸರೇ ಜಪಿಸುತ್ತಿರಲು
ಅರಿಯದೇ ನಿದ್ದೆಯ ಮಂಪರು ಆವರಿಸಿತ್ತು

ನೀ ಬಂದು ನನ್ನ ಕದ್ದಾಗಿತ್ತು
ಮೊಗ್ಗರಳಿ ಹೂವಾಗಿತ್ತು

ಮತ್ತಿನಲ್ಲಿ ತೇಲುವಂತೆ
ನನಗಾಯಿತು

ಇವೆಲ್ಲವೂ ಕನಸಿನಂತೆ
ಬಾಸವಾಯಿತು

ಆದರೆ ನೀ ಇತ್ತ ಮುತ್ತಿನ ಕಲೆ
ನಿಜವೆಂದು ಸಾಬೀತುಪಡಿಸಿತು

(ಚಿತ್ರ ಸೆಲೆ: ticotimes.net)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: