ಕವಿತೆ: ಮೌನದ ಮಾತು

– ಪ್ರತಿಬಾ ಶ್ರೀನಿವಾಸ್.

enjoy_the_silence

ಮುದ್ದು ಮೊಗದ ಮನ್ಮತನೇ
ಮುಗ್ದ ಮನಸ್ಸಿನ ಮಾಂತ್ರಿಕನೇ

ಮಲೆನಾಡ ಹುಡುಗಿಯ
ಮನದೊಳು ಹೇಗೆ ಬಂದೆ?
ಕಾಣದ ದಾರಿಯಲಿ ಒಬ್ಬಳೆೇ
ಸಾಗುತಿರುವಾಗ ಜೊತೆಗೆ
ಹೆಜ್ಜೆಯಾದ ನೀ ಯಾರು?
ಈ ಗೆಜ್ಜೆನಾದಕ್ಕೆ, ನಿನ್ನ ಹೆಜ್ಜೆ
ಸಪ್ಪಳ ಹೊಂದಿಕೊಂಡು
ಬವಿಶ್ಯಯದ ದಾರಿ ಸಿಕ್ಕಿದೆ…

ಈ ದಾರಿಯಲ್ಲೇ ನಡೆಯಲೇ
ಅತವ ನಿನ್ನ ಹೆಜ್ಜೆಗೆ ವಿರುದ್ದವಾಗಿ
ದೂರ ದೂರ ಸಾಗಲೇ…
ಅರ‍್ತವಾಗದೇ ಅಳುತ್ತಿರುವೆ
ಯಾರಿಗೂ ಕಾಣದಂತೆ
ನನ್ನ ಮನ ನಿನ್ನ ಅರಿತರೂ
ಈ ಬುದ್ದಿ ಆಲೋಚಿಸುತಿದೆ
ನಮ್ಮ ಕುಶಿ ಇನ್ನೊಬ್ಬರ ಕಣ್ಣಿರಾಗಬಾರದೆಂದು

ನೀ ಸಿಕ್ಕಾಗ ನಾ ಕರಗುವೆ
ನಿನ್ನ ಬೆಚ್ಚಗಿನ ಪ್ರೀತಿಯಲ್ಲಿ
ಮಂಜುಗಡ್ಡೆಯಾಗಿ…
ನೀ ಸಿಗದಿದ್ದರೂ ನಾ ಕರಗುವೇ
ದೂರಾದ ಆ ಬಿಸಿಲ ತಾಪಕ್ಕೆ
ಮೇಣದ ಬತ್ತಿಯಾಗಿ
ನೀ ಪಡುವ ಕಶ್ಟಕ್ಕೆ ನಾ
ಹೆಗಲಾಗುವೆ
ನಿನ್ನೆಲ್ಲಾ ಕುಶಿಯಲ್ಲೂ ನಾ
ನಗುತ ನಲಿವೆ

ಕಾದಿರುವೆ ಕಾದು ಕುಳಿತಿರುವೆ
ಕಾಡುತಿರುವ ಈ ಕನಸುಗಳು ನನಸಾಗಲೆಂದು

(ಚಿತ್ರ ಸೆಲೆ: voicesofyouth.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: