ಕವಿತೆ: ಗುಳಿಕೆನ್ನೆ ಹುಡುಗಿ

– ಹರ‍್ಶಿತ್ ಮಂಜುನಾತ್.

zui1hh5uxge-zack-minor

ತುಸುದೂರ ನಿಂತು ಗುಳಿಕೆನ್ನೆ ಹಿಡಿದು
ನಿನ್ನ ಮಾತಿಗೆಳೆಯಲೇ
ಆ ತುಂಟ ಮೌನ ಮೋರೆ ಗಂಟು ಜಗಳ
ಮನ ತುಂಬೀತಾಗಲೇ !

ಹಸಿರುಟ್ಟ ಉಡುಗೆ ಹಸಿರೂರ ಗಿರಿಗೆ
ಕಳೆ ಕಟ್ಟಿತೆನ್ನಲೇ
ಮಲೆನಾಡ ಮಗಳು ಮಳೆಬಿಲ್ಲೆ ಅವಳು
ಬದುಕು ರಂಗೇರಿತಾಗಲೇ !

ಎನ್ನವ್ವ ಎನಗೆ ತೋರಿರ‍್ಪ ಶಶಿಗೆ
ಸರಿಸಾಟಿ ನೀನೆಲೇ
ಮುಂಗುರುಳು ಹುಡುಕೊ ಬೆರಳೆನ್ನ
ಸರನೆ ಸರಿದಾಡಿತಾಗಲೇ !

ಆ ಬಳುಕು ಬಿನ್ನಾಣ ನಿನ ನಡುವಾಟ
ನಾನಲ್ಲೇ ಸೋತೆನೇ
ಅದರವ ಅರಸುವ ರಸಿಕ ಎನ್ನ ಮನಕೆ
ದುಂಬಿಯ ಸಂಗಬೇಕೆಲೇ !

ಅರಸ ನಾನು ಕನಸಿನ ಅರಮನೆಗೆ
ಹುರುಪೆನಗೆ ನಿನ ನೆನಪೆ
ನೀ ಬರದೆ ಮರೆಯಾದರೆ ಬೆಳಕೆ
ಕನಸಿರದೆ ಮಡಿವೇನಾಗಲೇ !

(ಚಿತ್ರ ಸೆಲೆ: unsplash.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: