ಕಾಯುವೆ ಆ ಸಮಯವನ್ನ

– ಸುರಬಿ ಲತಾ.

wait-love

ಕರಗುತಿದೆ ಮಂಜಿನ ಹನಿ
ಸುತ್ತಲೂ ಕೇಳುತಿದೆ ನಿನ್ನದೇ ದನಿ
ನೀ ಇರದಿರಲು ನನ್ನ ಸನಿಹ
ತನುವಲ್ಲಿ ನಿನ್ನದೇ ವಿರಹ

ಎಲ್ಲೇ ಇರು ನೀನು
ಹೇಗೇ ಇರು ನೀನು
ನಿನಗಾಗಿ ಕಾಯುವೆ ನಾನು

ಏನೇ ಹೇಳಲಿ ಮನವು
ಒಡೆದರೇನು ಎದೆಯು
ನಿನಗಾಗಿ ಕಾಯುವೆ ನಾನು

ಕನಸು ಮುರಿದರೇನು
ಒಡಲು ಬೆಂದರೇನು
ನಿನಗಾಗಿ ಕಾಯುವೆ ನಾನು

ಕಣ್ಣ ಹನಿ ಉಪ್ಪು
ತರುತಿರಲು ಮುಪ್ಪು
ನಿನಗಾಗಿ ಕಾಯುವೆ ನಾನು

ನೀ ಅರಿಯಲಾರೆ ಈ ಬಾದೆ
ನೊಂದು ಸೋತು ಹೋದೆ
ಆದರೂ ಕಾಯುವೆ ನಿನಗಾಗಿ ನಾನು

ಕೊನೆಗೆ ಒಂದು ದಿನ
ಸೋಲಿಸುವೆ ಆ ವಿದಿಯನ್ನ
ಕೂಡುವೆ ನಾನು ನಿನ್ನ

ನಲಿವೆ ಹಕ್ಕಿಯಂತೆ ಆ ದಿನ
ಮರೆವೆ ನೊಂದ ಕ್ಶಣಗಳನ್ನ
ಕಾಯುವೆ ಆ ಸಮಯವನ್ನ

( ಚಿತ್ರ ಸೆಲೆ: 7te.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: