ಮನಸ್ಸಿಲ್ಲದೆ ಕೊರಳ ಕೊಟ್ಟಳಲ್ಲ..

– ಸುರಬಿ ಲತಾ.

ottayadamaduve

ಮನೆ ತುಂಬಾ ಮಲ್ಲಿಗೆ ಮಾಲೆಗಳ ಗಮದಲಿ
ಅಲಂಕ್ರುತವಾಗಿದೆ ಮೂಲೆ ಮೂಲೆಗಳಲಿ

ಮುತ್ತೈದೆಯರು, ನೆಂಟರಿಶ್ಟರು
ತುಂಬಿಹರು ಮನೆಯಲ್ಲಿ

ಮಕ್ಕಳ ಆನಂದಕೆ ಪಾರವೆಲ್ಲಿ
ಸಂತಸದ ಅಲೆ ತುಂಬಿಹುದಿಲ್ಲಿ

ಮದುಮಗಳು ಮಾತ್ರ ಮೂಲೆ ಸೇರಿಹಳು ಇಲ್ಲಿ
ಎಂತಹುದೋ ಯೋಚನೆ ಅವಳ ಮನದಲ್ಲಿ

ನಗುವಿಲ್ಲ ಮೊಗದಲ್ಲಿ
ಸಂತಸದ ಕಳೆ ಕಾಣದಾಗಿದೆ ಅವಳಲ್ಲಿ

ಅವರವರ ಕೆಲಸ ಅವರಿಗಲ್ಲಿ
ಕೇಳುವರಾರು, ಒಂಟಿ ಇವಳಿಲ್ಲಿ

ಮದುಮಗನ ಮೇಲೆ ಮನಸ್ಸಿಲ್ಲ
ಇವಳ ಅಂತರಂಗ ಬಲ್ಲವರಾರಿಲ್ಲ

ತಲೆ ತಗ್ಗಿಸಿ ನಿಂತಳಲ್ಲ
ಮನಸ್ಸಿಲ್ಲದೆ ಕೊರಳ ಕೊಟ್ಟಳಲ್ಲ

ಮುಂದಿನ ಜೀವನವೇನೋ ಇವಳ ಅರಿವಿಗಿಲ್ಲ
ಕಣ್ಣ ಹನಿ ತೊಡೆಯುವರಿಲ್ಲ

( ಚಿತ್ರ ಸೆಲೆ: shoutoutuk.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications