ಕುಡುಕನಿಗೆ ಉಪದೇಶ

– ಶಶಿ.ಎಸ್.ಬಟ್.


ಏಕೆ ಕುಡಿವೆ ಅಳತೆಮೀರಿ
ಸಾಕು ಮಾಡು ಮನುಜನೆ|
ಮನೆಯು ಹೋಗಿ ನರಕವಾಯ್ತು
ಸಾಕುಮಾಡು ಕುಡುಕನೆ||

ಹೆಜ್ಜೆ ತಪ್ಪಿ ನಡೆಯುತಿರುವೆ
ನಿನಗೆ ದಾರಿ ಕಾಣದು|
ಬುದ್ದಿ ಶೂನ್ಯನಾಗಿ ಬದುಕಿ
ನಿನಗೆ ಏನು ತೋಚದು||

ನಿನ್ನ ನಂಬಿ ಇರುವವರಿಗೆ
ನೀನು ಏನು ಕೊಡುವೆಯಾ|
ಅವರ ಕಶ್ಟಸುಕವನೆಲ್ಲ
ಏನು ಎಂದು ತಿಳಿದೆಯಾ||

ನಿನ್ನ ಒಂದು ಪ್ರೀತಿಗಾಗಿ
ಮನೆಯವರೆಲ್ಲ ಕಾದರೆ|
ಒಂದೆ ಒಂದು ತಪ್ಪಿನಿಂದ
ಬಾಳಿನಲ್ಲಿ ತೊಂದರೆ||

ಕುಡಿತದಿಂದ ಯಾರಿಗೇನು
ಲಾಬವಿದೆ ಹೇಳು ನೀ|
ಕುಡಿವವರ ಸಂಗ ಬಿಟ್ಟು
ಬದುಕುವುದು ಕಲಿಯು ನೀ||

( ಚಿತ್ರ ಸೆಲೆ: clipartkid.com )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.